........ನಾವ್ ಎಷ್ಟ್ ಬೇಗ ಬೆಳೆದು ದೊಡ್ಡೋರಾದ್ವಿ ಅಲ್ವಾ. ಆ ಬಾಲ್ಯ, ಆ ಗೆಳೆತನ, ಶಾಲೆ , ಆಟ, ಪಾಠ, ಕಾಲೇಜು ಎಷ್ಟು ಚೆನ್ನಾಗಿತ್ತು ಅಲ್ವಾ? ಎಲ್ಲ ಜೊತೇಲೆ ಇತ್ತು ಗೊತ್ತೆ ಆಗಿಲ್ಲ ನೋಡು.
ನೀನ್ ನೋಡು ಒಳ್ಳೆ ಗುಂಡ್ ಗುಂಡಾಗಿ ಮುದ್ ಮುದ್ದಾಗಿ ಒಳ್ಳೆ ಎಳೆ ಲಿಂಬೆ ಹಣ್ಣಿನ ಹಾಗೆ ಬೆಳ್ದಿದ್ದೀಯಾ?
ನಾನ್ ನೋಡು ಆ ಕಡೆ ಸೋರೆಕಾಯಿನು ಅಲ್ಲ, ಈ ಕಡೆ ಹೀರೆಕಾಯಿನು ಅಲ್ಲ ಹಂಗಿದ್ದೀನಿ.
ಯಾರ್ ಬರ್ತಾನೋ ಏನೊ ನಿನ್ನ ಹತ್ಕೊ ಹೋಗ್ಲಿಕೆ.
ಹೌದೂsss.....!!! ನೀನಾವಾಗ ನನ್ನ ರೇಗಿಸ್ತಿದ್ದಿ ಅಲ್ವಾ ನಿನ್ ಫ್ರೆಂಡ್ ಜೊತೆ ಸೇರಿ ಲವ್ ಗಿವ್ ಅಂತ. ಹಂಗೆ ರೇಗಿಸಿ ರೇಗಿಸಿ ನಾನ್ ಅವಳನ್ನೆ ಪ್ರೀತ್ಸೋ ಹಾಗ್ ಮಾಡ್ದೆ. once again thank you ನಿಂಗೆ. ಹಂಗೂ ನಾನೇನು ಕಮ್ಮಿ ಇರ್ಲಿಲ್ಲ ನಿನ್ನೂ ರೇಗಿಸ್ತಿದ್ದೆ.
ಆ ಸ್ನೇಹ ಎಷ್ಟು ಚೆನ್ನ ಅಲ್ವಾ, ಅದು ಇಲ್ಲಿ ತನಕ ಕರೆ ತಂತು ನೋಡು ನನ್ನಾ.
ಹೌದೂ.....!! ನೀನೇನೆ ಸುಮ್ನಿದ್ದೀಯೆ ಆವಾಗೆಲ್ಲ ವಟ ವಟ ಅಂತಿದ್ದೋಳು, ಈವಾಗ ಸುಮ್ನೆ ಇದ್ದೀಯಾ, ಪ್ಲೀಸ್ ಏನಾದ್ರು ಮಾತಾಡೆ.
ಹೇಗೊ ಮಾತಾಡ್ಲಿ, ಹೇಗ್ ಶುರು ಮಾಡ್ಲಿ...
ನಾನೆ ತಪ್ ಮಾಡ್ಬಿಟ್ಟೆ ಕಣೋ, ನಾನು ನಿನ್ನ ರೇಗಿಸಿ ರೇಗಿಸಿ ಅವಳನ್ನೆ ಲವ್ ಮಾಡೋ ಹಾಗ್ ಮಾಡ್ದೆ. ಆದ್ರೆ ನಿನ್ ಮೇಲಿನ ಸ್ನೇಹ ಸಲಿಗೆಯಿಂದಾನೊ ಏನೊ.! ನಾನೆ ಗೊತ್ತಿಲ್ದೆ ನಿನ್ನ ತುಂಬ ಹಚ್ಕೊ ಬಿಟ್ಟೆ. ಈವಾಗ್ ಅನ್ಸುತ್ತೆ ನೋಡು...ಇದು ನಿನ್ನ ಮೇಲಿನ ಪ್ರೀತಿಯೇನೊ ಅಂತ. ಈವಾಗ್ ಹೇಳಿ ಏನ್ ಪ್ರಯೋಜನ ಎಲ್ಲ ಮುಗಿದ ಅಧ್ಯಾಯದಂತೆ ಆಗಿದೆ ನನ್ ಬಾಳು.
ಲೇ .....ಕೋತಿ,
ಇಷ್ಟೇನಾ ನನ್ನ ಸ್ನೇಹನ ಅರ್ಥ ಮಾಡ್ಕೊಂಡಿದ್ದು,
ನೀನ್ ಏನ್ ಹೇಳೋದು
ನಿನಗೊಂದು ವಿಷ್ಯಾ ನಾನೆ ಹೇಳಾ? ಅದು ನಾನ್ ಮತ್ತು ನಿನ್ ಫ್ರೆಂಡ್ ಆಡಿದ ಒಂದ್ ಚಿಕ್ ಲವ್ ಡ್ರಾಮಾ.
ನಿನಗಿಂತ ಮೊದ್ಲು ನಾನೆ ನಿನ್ನ ಇಷ್ಟ ಪಟ್ಟಿದ್ದೆ. ಆದ್ರೆ ನೀನೆ ಹೇಳಿ ಅಂತಾ ಕಾಯ್ತಾ ಕಾಯಿಸ್ತಾ ಇದ್ದೆ.
ಕೊನೆಗೂ ನಿನ್ ಬಾಯಾರೆ ಹೇಳ್ಬಿಟ್ಟೆ, ಇದೂ ಒಂಥರಾ ಮುದ್ ಮುದ್ದಾಗೆ ಇದೆ
ಕೊನೆಗೂ ಈ ನಿನ್ನ ಪ್ರೇಮಿ ಪ್ರಸಾದುನೆ ಗೆದ್ದಿದ್ದು.
Stage from ನೆನಪಿನ ನಾವಿಕ@ ಪ್ರಸಾದ್