ಅನಿಸಿಕೆ......ಅನಿಸಿದ್ದು

ನಾವು ಮನಸಿಗೆ ಎಷ್ಟು ಕೈ ಚಾಚಿದ್ರೂ...... ನಮಗೆ ಜಾಸ್ತಿ ನೆನಪಾಗೋದು ನಾವು ಇಷ್ಟ ಪಡೋರು ಅಥವಾ ನಮ್ಮನ್ನ ಇಷ್ಟ ಪಟ್ಟು ನೆನೆಸ್ಕೊಳ್ಳೋರು. ಅದು ಬಿಟ್ಟಿರಲಾದಂತ ಸ್ನೇಹ ಸಂಬಂಧ ಇರಬಹುದು, ಕೌಟಂಬಿಕ ಸಂಬಂಧ ಆಗಿರಬಹುದು, ತಾಯಿ ತಂದೆಯ ಮಾತೃ ವಾತ್ಸಲ್ಯ ಆಗಿರಬಹುದು. ಹೀಗೆ ಯಾವ ರೂಪದಲ್ಲಾದ್ರು ಆಗಿರಬಹುದು. ಅಂತಹ ಪ್ರೀತಿಗೆ ಕಟ್ಟು ಬಿದ್ದು ನೆನೆಸ್ಕೊಳ್ಳೊ ಅದೆಷ್ಟೊ ಮನಸ್ಸು ನಮ್ಮ ಹತ್ತಿರನೆ ಸುಳಿತಿರಬಹುದು. ಅದನ್ನ ನಾವು ಗಮನಿಸ್ದೆ, ಅಂತ ಸಂಬಂಧನ ದೂರ ಮಾಡ್ತಿರಲೂ ಬಹುದು, ಯಾರಿಗೊತ್ತು? ಈ ಪ್ರಪಂಚನೆ ಹಾಗೆ ಕಣ್ಣೆದೆರುಗಿದ್ದ ಆನೆ ಕಾಣ್ಸಲ್ಲ....ಅಷ್ಟು ದೂರ ಇದ್ದ ಇರುವೆ ಕಾಣ್ಸೊ,  ಈ ನಮ್ ಮನಸ್ಸನ್ನ ಎಷ್ಟು ಬದ್ಲಾಯಿಸುತ್ತೆ ಈ ಜಗತ್ತು.
ನನಗನ್ನಿಸೋದು ಒಮ್ಮೊಮ್ಮೆ......ಎಲ್ಲವನ್ನ ಜಗತ್ತು, ಜನ ಅಂತ ಈ ನೆಪಗಳ ಮೇಲೆ ಕಾರಣಗಳನ್ನ ತಳ್ಳಿ ಬಿಟ್ಟು ನಾವು ತೆಪ್ಪಗಿರ್ತಿವಿ ಎಷ್ಟು ಸುಲಭ ಅಲ್ವಾ?
 ಸರಿ ಮತ್ತೆ ಸಿಗೋಣ.....ಏನಂತಿರಾ?
ಪ್ರಸಾದ್.......🖍

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||