Wednesday, September 25, 2019

ಹನಿ ಜನಿ

ಇಲ್ಲಿ ಯಾರಿಗು
ಯಾರು ಇಲ್ಲ....
ನಮಗೆ ನಾವೆ
ಎಲ್ಲ....||

Saturday, August 24, 2019

ಲವ್ ಅಂದರೆ ಹಿಂಗೇನಾ?

      ........ನಾವ್ ಎಷ್ಟ್ ಬೇಗ ಬೆಳೆದು ದೊಡ್ಡೋರಾದ್ವಿ ಅಲ್ವಾ. ಆ ಬಾಲ್ಯ, ಆ ಗೆಳೆತನ, ಶಾಲೆ , ಆಟ, ಪಾಠ, ಕಾಲೇಜು ಎಷ್ಟು ಚೆನ್ನಾಗಿತ್ತು ಅಲ್ವಾ? ಎಲ್ಲ ಜೊತೇಲೆ ಇತ್ತು ಗೊತ್ತೆ ಆಗಿಲ್ಲ ನೋಡು.
    ನೀನ್ ನೋಡು ಒಳ್ಳೆ ಗುಂಡ್ ಗುಂಡಾಗಿ ಮುದ್ ಮುದ್ದಾಗಿ ಒಳ್ಳೆ ಎಳೆ ಲಿಂಬೆ ಹಣ್ಣಿನ ಹಾಗೆ ಬೆಳ್ದಿದ್ದೀಯಾ?
  ನಾನ್ ನೋಡು ಆ ಕಡೆ ಸೋರೆಕಾಯಿನು ಅಲ್ಲ, ಈ ಕಡೆ ಹೀರೆಕಾಯಿನು ಅಲ್ಲ ಹಂಗಿದ್ದೀನಿ.
 ಯಾರ್ ಬರ್ತಾನೋ ಏನೊ ನಿನ್ನ ಹತ್ಕೊ ಹೋಗ್ಲಿಕೆ.
 ಹೌದೂsss.....!!! ನೀನಾವಾಗ ನನ್ನ ರೇಗಿಸ್ತಿದ್ದಿ ಅಲ್ವಾ ನಿನ್ ಫ್ರೆಂಡ್ ಜೊತೆ ಸೇರಿ ಲವ್ ಗಿವ್ ಅಂತ. ಹಂಗೆ ರೇಗಿಸಿ ರೇಗಿಸಿ ನಾನ್ ಅವಳನ್ನೆ ಪ್ರೀತ್ಸೋ ಹಾಗ್ ಮಾಡ್ದೆ. once again thank you ನಿಂಗೆ. ಹಂಗೂ ನಾನೇನು ಕಮ್ಮಿ ಇರ್ಲಿಲ್ಲ ನಿನ್ನೂ ರೇಗಿಸ್ತಿದ್ದೆ.
    ಆ ಸ್ನೇಹ ಎಷ್ಟು ಚೆನ್ನ ಅಲ್ವಾ, ಅದು ಇಲ್ಲಿ ತನಕ ಕರೆ ತಂತು ನೋಡು ನನ್ನಾ.
   ಹೌದೂ.....!! ನೀನೇನೆ ಸುಮ್ನಿದ್ದೀಯೆ ಆವಾಗೆಲ್ಲ ವಟ ವಟ ಅಂತಿದ್ದೋಳು, ಈವಾಗ ಸುಮ್ನೆ ಇದ್ದೀಯಾ, ಪ್ಲೀಸ್ ಏನಾದ್ರು ಮಾತಾಡೆ.
    ಹೇಗೊ ಮಾತಾಡ್ಲಿ, ಹೇಗ್ ಶುರು ಮಾಡ್ಲಿ...
  ನಾನೆ ತಪ್ ಮಾಡ್ಬಿಟ್ಟೆ ಕಣೋ, ನಾನು ನಿನ್ನ ರೇಗಿಸಿ ರೇಗಿಸಿ ಅವಳನ್ನೆ ಲವ್ ಮಾಡೋ ಹಾಗ್ ಮಾಡ್ದೆ. ಆದ್ರೆ ನಿನ್ ಮೇಲಿನ ಸ್ನೇಹ ಸಲಿಗೆಯಿಂದಾನೊ ಏನೊ.! ನಾನೆ ಗೊತ್ತಿಲ್ದೆ ನಿನ್ನ ತುಂಬ ಹಚ್ಕೊ ಬಿಟ್ಟೆ. ಈವಾಗ್ ಅನ್ಸುತ್ತೆ ನೋಡು...ಇದು ನಿನ್ನ ಮೇಲಿನ ಪ್ರೀತಿಯೇನೊ ಅಂತ. ಈವಾಗ್ ಹೇಳಿ ಏನ್ ಪ್ರಯೋಜನ ಎಲ್ಲ ಮುಗಿದ ಅಧ್ಯಾಯದಂತೆ ಆಗಿದೆ ನನ್ ಬಾಳು.
   ಲೇ .....ಕೋತಿ,
ಇಷ್ಟೇನಾ ನನ್ನ ಸ್ನೇಹನ ಅರ್ಥ ಮಾಡ್ಕೊಂಡಿದ್ದು,
ನೀನ್ ಏನ್ ಹೇಳೋದು
ನಿನಗೊಂದು ವಿಷ್ಯಾ ನಾನೆ ಹೇಳಾ? ಅದು ನಾನ್ ಮತ್ತು ನಿನ್ ಫ್ರೆಂಡ್ ಆಡಿದ ಒಂದ್ ಚಿಕ್ ಲವ್ ಡ್ರಾಮಾ.
    ನಿನಗಿಂತ ಮೊದ್ಲು ನಾನೆ ನಿನ್ನ ಇಷ್ಟ ಪಟ್ಟಿದ್ದೆ. ಆದ್ರೆ ನೀನೆ ಹೇಳಿ ಅಂತಾ ಕಾಯ್ತಾ ಕಾಯಿಸ್ತಾ ಇದ್ದೆ.
ಕೊನೆಗೂ ನಿನ್ ಬಾಯಾರೆ ಹೇಳ್ಬಿಟ್ಟೆ, ಇದೂ ಒಂಥರಾ ಮುದ್ ಮುದ್ದಾಗೆ ಇದೆ
 ಕೊನೆಗೂ ಈ ನಿನ್ನ ಪ್ರೇಮಿ ಪ್ರಸಾದುನೆ ಗೆದ್ದಿದ್ದು.
Stage from ನೆನಪಿನ ನಾವಿಕ@ ಪ್ರಸಾದ್

Sunday, August 18, 2019

Dream

ಎಂದೊ ಕಂಡ ಕನಸು
ಇಂದು ನನಸಾಗುವ ಹಾಗಿದೆ.
.
.
.

ಅದು
ನೀನು ಬಂದಾಗ...!!

ಹನಿ ಜನಿ

ಹಂಗ್ ಅಂದ್ರೆ
ಹಿಂಗ್ ಅಂತಾರೆ...!!
ಹಿಂಗ್ ಅಂದ್ರೆ 
ಹಂಗ್ ಅಂತಾರೆ...!!

ಹಿಂಗ್ ಅಂದ್ರೆ ಏನಂತಾರೆ...?

Tuesday, August 6, 2019

First love

ಮೊದಲ ಪ್ರೀತಿಗೆ
ಮಾತು ಚೆನ್ನಾ....|
ಮೊದಲ ಪ್ರೀತಿಗೆ
ಮೌನವು ಚೆನ್ನಾ...|
ಮೊದಲ ಪ್ರೀತಿಗೆ
ನಗುವು ಚೆನ್ನಾ...|
ಮೊದಲ ಪ್ರೀತಿಗೆ
ನೋಟವು ಚೆನ್ನಾ...|
ಮೊದಲ ಪ್ರೀತಿಗೆ
ಎಲ್ಲವೂ ಚೆನ್ನಾ...|

Wednesday, July 24, 2019

ಹನಿ ಜನಿ.

ಎಲೆಯ ಮೇಲಿನ
ಇಬ್ಬನಿಗೆ
ಜಾರಿ ಹೋಗುವೆನೆಂದು
ಗೊತ್ತಿದ್ದರು.


ಅದು ಹೊಳೆಯುತಿತ್ತು..!!
Hi

Saturday, July 20, 2019

ಹನಿ ಜನಿ

ಮಾತು
ತಪ್ಪಾದರೇನು...?
ಅದ ಒಪ್ಪ ಹಾಕಿ
ಮತ್ತೆ ಧರಿಸುವೆ
ನಾನು.

Sunday, July 14, 2019

Loveನಲ್ಲಿ ನಾನು hero

ನನ್ನ ಹುಡುಗಿಯ ಅಣ್ಣನಿಗೆ....
⏩⏩⏩⏩⏩⏩⏩⏩
ನನ್ನ ಹುಡುಗಿ
ನಿನ್ನ ತಂಗಿಯಾದರೆನು??
ಪ್ಯೂಚರಲ್ಲಿ ನೀನು ನನ್ನ
ಮುದ್ದಿನ ಬಾವ.
******
ನಿನ್ನ ತಂಗಿಗೆ ನೀನು
ಅಣ್ಣನಾಗಿ ಕರ್ತವ್ಯ ಮಾಡುತಿ...!!
ಆದರೆ
ನಾನು ನಿನ್ನ ತಂಗಿಯ
ಹುಡುಗನಾಗಿ ಕರ್ತವ್ಯ ಮಾಡುವೆ
ಅವಳು ನನ್ನವಳೆಂದು.
*******
ಅವಳಿಗೆ ನೀನು
ಅಣ್ಣನಾಗಿರಬಹುದು.
ನಾನು
ಅವಳ ಹೃದಯದ ಹುಡುಗ
ಅವಳ ಕನಸಿನ ಹುಡುಗ.
*******
ಅವಳ ಮನಸನು
ನೋಯಿಸಬೇಡ
ನನ್ನನ್ನು ಕೆರಳಿಸಿದ ಹಾಗೆ...
*******
ನೀ ಅವಳಿಗೆ
ಅಣ್ಣನಾದರೆ ಏನಂತೆ??
ಅವಳನು
ಹೂವಿನ ಪಲ್ಲಕ್ಕಿಯ ಮೇಲೆ
ಕರೆದೊಯ್ಯುವ ಧೀರನು
ನಾನೆ.

Loveನಲ್ಲಿ ನಾನು hero

ನನ್ನ ಹುಡುಗಿಯ ಅಣ್ಣನಿಗೆ....
⏩⏩⏩⏩⏩⏩⏩⏩
ನನ್ನ ಹುಡುಗಿ
ನಿನ್ನ ತಂಗಿಯಾದರೆನು??
ಪ್ಯೂಚರಲ್ಲಿ ನೀನು ನನ್ನ
ಮುದ್ದಿನ ಬಾವ.
******
ನಿನ್ನ ತಂಗಿಗೆ ನೀನು
ಅಣ್ಣನಾಗಿ ಕರ್ತವ್ಯ ಮಾಡುತಿ...!!
ಆದರೆ
ನಾನು ನಿನ್ನ ತಂಗಿಯ
ಹುಡುಗನಾಗಿ ಕರ್ತವ್ಯ ಮಾಡುವೆ
ಅವಳು ನನ್ನವಳೆಂದು.
*******
ಅವಳಿಗೆ ನೀನು
ಅಣ್ಣನಾಗಿರಬಹುದು.
ನಾನು
ಅವಳ ಹೃದಯದ ಹಡುಗ
ಅವಳ ಕನಸಿನ ಹುಡುಗ.
*******
ಅವಳ ಮನಸನು
ನೋಯಿಸಬೇಡ
ನನ್ನನ್ನು ಕೆರಳಿಸಿದ ಹಾಗೆ...
*******

ಇಬ್ಬನಿ

ನಿಮಗಿಬ್ಬರಿಗು ನಾ ಕೊಡಲಿಲ್ಲ
ನನ್ನ ವಿಳಾಸ.


ಅಂತಿತ ಸ್ನೇಹ ಅಲ್ಲ

ಕೈ ಕೊಡುವ ಮಾತೆ ಇಲ್ಲ
ಕೈ ಕೊಟ್ಟು
ಬೇರೆ ಆಗುವ ಮಾತೆ ಇಲ್ಲ.

ಹನಿ ಜನಿ

ಚಿಗುರೆಲೆಗೆ ತಿಳಿದಿಲ್ಲ
ನಾಳೆ ತನ್ನ ಸರದಿ
ಎಂದು....
ಹಸಿರೆಲೆಗೆ ತಿಳಿದರೂ
ಗಹಗಹಿಸಿ ನಗುತಿದೆ...!!

Wednesday, July 10, 2019

ನೀ(R).

ಮನೆಯಂಗಳದ ದಾರಿಲಿ
ಸಾಗುವ ಅರಸಿ ನೀ..
ನೀ.....ಬಂದರೆ
ಮನದ ಬಾಗಿಲು ತೆರೆದು
ಶ್ರೀಮತಿ ಅನ್ನುವೆ.

ಇಬ್ಬನಿ

ನಾನು
ಅನ್ನೋನು......??!!

ಇಬ್ಬನಿ

ಸಂಜೆಯಲಿ
ಅರಳಿದ ಹೂವು ನೀನು.

ಇಬ್ಬನಿ

ಬದುಕಿನ
ಏಣಿಗೆ ಮೆಟ್ಟಿಲಿಲ್ಲ

ಇಬ್ಬನಿ

ಓಲೆಯ ಗೀಚುವೆ
ಓಲೈಸು ಬಾ

Sunday, July 7, 2019

ಅರಳಿದ ಮೊಗ್ಗು

ಕಣ್ಣು ಕಾಣದೆ ಇರೋರು ಕತ್ತಲಲ್ಲಿ ಬದುಕು ನಡೆಸ್ತಾರೆ, ಕಣ್ಣು ಕಾಣುವವರು ಬೆಳಕಲ್ಲಿ ಬದುಕು ನಡೆಸ್ತಾರೆ.

ಹನಿ ಜನಿ

ಸತ್ಯಕೆ
ಬೆಲೆಯಿಲ್ಲದ
ಕಾಲ
ನಿತ್ಯವು ನರಕವಾಯಿತು.

ಹನಿ ಜನಿ.

ಅಂದದ
ಅರಮನೆಯ 
ಗಿಳಿಗೆ
ಚಿನ್ನದ 
ಪಂಜರ 
ಇದ್ದೇನು ಸುಖ? 

Friday, July 5, 2019

ನಿನ್ನ ಹೀರೊ

 ಲೈಫಲ್ಲಿ ಝೀರೊ ಆದ್ರೆ
ಏನಂತೆ ಚಿನ್ನಾ..??
ಪ್ರೀತಿಲಿ ನಾನು
ನಿನ್ನ ಹೀರೊನೇ..

My style


ನೂರೆಂಟು ಪ್ರಶ್ನೆ ಮಾಡುವ ಜಗತ್ತಿಗೆ ನಾವು ತಲೆ ತಗ್ಗಿಸುವ ಅಗತ್ಯ ಇಲ್ಲ. ಯಾಕೆಂದರೆ ..?? ನಾವು ಹಿಡಿಯುವ ಹಾದಿ ನೇರವಾಗಿ, ಸರಿಯಾಗಿದ್ದರೆ ಎದೆ ಉಬ್ಬಿಸಿ,  ತಲೆ ಎತ್ತಿ ನಡೆಯುವ ಜಾಣತನ ನಮ್ಮಲ್ಲಿದ್ದರೆ ಸಾಕು.
Stage from ನೆನಪಿನ ನಾವಿಕ@ಪ್ರಸಾದ್

ಭೇಟಿ

ನೀನು
ಬಸ್ಸಿಂದ ಬರುವ ಹೊತ್ತಿಗೆ
ಸಂಜೆಯಾಗಿತ್ತು....!
ನಾನು
ಅಂಗಡಿಗೆ ಹೋಗುವ ಹೊತ್ತಿಗೆ
ಸಂಜೆಯಾಗಿತ್ತು....!

ಅವಳಿಗಾಗಿ ಕವನ

ಜಗಕೆ ತಿಳಿದಿಲ್ಲ
ನಮ್ಮಿಬ್ಬರ ಪ್ರೀತಿ


ಅದಕ್ಕಿಂತ ಹೆಚ್ಚಾಗಿ....

ನಮ್ಮಿಬ್ಬರ ಅಪ್ಪ-ಅಮ್ಮನಿಗು ತಿಳಿದಿಲ್ಲ
 ನನ್ನ ಅವಳ ಹುಚ್ಚು ಪ್ರೀತಿ.💝💝

So sweet.....💟💟🌹

ಅರಳಿದ ಮೊಗ್ಗು

ಬದುಕು ಎಂಬುವುದು ತೆರೆ ಮೇಲಿನ ಸಿನೆಮಾವಲ್ಲ, ತೆರೆ ಹಿಂದಿನ ಕಸರತ್ತು.

ಅರಳಿದ ಮೊಗ್ಗು

ಕಲ್ಲು ಬಂಡೆಯನ್ನಾದರು ಕರಗಿಸಿ ಶಿಲೆಯಾಗಿಸಬಹುದು ಆದರೆ ಕಲ್ಲು ಬಂಡೆಗು ಮೀರಿದ ಮನಸ್ಥಿತಿಗೆ ಕರಗಿಸಿ ಶಿಲೆಯಾಗಿಸೋದು ಅಸಾಧ್ಯ.

Thursday, July 4, 2019

Post

ಒಂದು ನಗೆ ಹನಿ
 ಹಗಲು ಸೂರ್ಯ ಬೆಳಗದಿದ್ದರು ನಾನು ಚಿಂತಿಸಲ್ಲ, ರಾತ್ರಿ ಕರೆಂಟ್ ಇಲ್ಲದಿದ್ದರು ಚಿಂತಿಸಲ್ಲ,
ಸೊಸೈಟಿಯಲ್ಲಿ ನೀಡಿದ 3ಲೀಟರ್ ಸೀಮೆಎಣ್ಣೆ ಮಳೆಗಾಲದಲ್ಲಿ stock ಇದೆ.

Wednesday, July 3, 2019

Post

ಸೃಷ್ಟಿ ಕರ್ತನಿಗೊಂದು ನನ್ನ ಮನವಿ
(ಕಣ್ಣೀರ ಕಥೆ)
ಇಂತಹ ಬದುಕು ಜಗತ್ತಿನ ಯಾವ ಜೀವಿಗು ಬೇಡ.


Post

ನೀ ಹಂಗೆ ನೋಡಬೇಡ ಚಿನ್ನಾ,.....ನಾ ಹ್ಯಾಂಗೆ ನೋಡಲಿ ನಿನ್ನಾ....??

ಅಪರೂಪದ ಅತಿಥಿ

ಮಳೆಗಾಲದ ಅತಿಥಿಗಳು

ಮಳೆ ಬಂದಾಗ
ನನ್ನ ನೆನಪಾಯಿತೇನೊ?
ನಿಮಗೆ
ನನ್ನ ಮನೆಗೆ
ಬರಬೇಕೆಂದು...
ಹಾವು, ಚೇಳು, ಹುಳ, ಎರೆ ಹುಳ, ಗೊರಂಟಿ, ಹುಳ ಹಪ್ಪಟೆ....!!

Post




                        ತೀರವು ಸಮೀಪಿಸುತಿದೆ

Tuesday, July 2, 2019

ನಾ ನೆನೆದರು ಪರವಾಗಿಲ್ಲ



ಮಳೆ ಬಂದು ಗಾಳಿ ಬಂದು ಪ್ರಳಯನೆ ಆಗಿ ಪ್ರಪಂಚ ತಲೆ ಕೆಳಗಾದರು ನಾ ನಿನ್ನನೆಂದಿಗು ಬಿಡೋದಿಲ್ಲ. ಇಂತಿ ನನ್ನ ಪ್ರೀತಿಯ      " ಸ್ಕ್ರೀನ್ ಟಚ್ ಮೊಬೈಲ್ "

Monday, July 1, 2019

Post


 ನಿನ್ನ ಉದ್ದ ಜಡೆಗೆ ನನ್ನ ಕಣ್ಣು ಬಿದ್ದಿದೆ.

*********************************************

ಇಬ್ಬನಿ

ದೂರದ ಬೆಟ್ಟವು
ನುಣ್ಣಗೆ.

Sunday, June 30, 2019

ಹನಿ ಜನಿ

ಮುಗಿಯದ
ಕೊನೆಯ ಪುಟವು 
ಹರಿದು ಹೋಗಿದೆ
ಆದರು ಜೋಡಿಸಿ 
ಓದುವ ಕಾತುರ. 

Friday, June 28, 2019

ಇಬ್ಬನಿ

ಕೊಡದ ಹನಿ ಬಿಂದುವಿಗು
ಆಕಾರವಿಲ್ಲ.

ಇಬ್ಬನಿ

ನನ್ನ ಪಿಸುದನಿಗೆ
ನಿನ್ನ ಕಿವಿಯೋಲೆ ಆಲಿಸಲು.

Tuesday, June 25, 2019

ನಾನು-ನಾವು ವ್ಯತ್ಯಾಸ

ಈ ಜಗತ್ತಲ್ಲಿ ನಾನು ಎಂದು ಬದುಕಿದವರು ಕ್ಷಣದಲ್ಲೆ ಮಣ್ಣಾದರು. ನಾವು ಎಂದು ಬದುಕಿದವರು ಜನ ಮಾನಸದಲ್ಲಿ ಅಮರರಾದರು.
Stage from ನೆನಪಿನ ನಾವಿಕ@ಪ್ರಸಾದ್

Image post




Monday, June 24, 2019

ಇಬ್ಬನಿ

ದಾರಿ ತೋರುತಿಹುದು
ಒಂಟಿ ಬೀದಿ ದೀಪ.

ಚಿನ್ನು ಪುಟ್ಟ

ನಾ ನಿನಗೆ ಕೇಳದೆ ಇರೋದು ಯಾವುದು ಗೊತ್ತಾ ಚಿನ್ನು ಮರಿ.
  - ನೀನು ಸ್ಕೂಲ್ ಗೆ ಹೋಗಿದ್ದೇಯಾ?
  - ನೀನು ಓದಿದೆಯಾ? ಬರೆದೆಯಾ? ಎಂದು.
ನಾ ಕೇಳೋದು ಒಂದೆ....!!
  - ನೀನು ಆಟ ಆಡಿದೆಯಾ?
  - ಊಟ ಮಾಡಿದೆಯಾ? ಎಂದು.
ಯಾಕೆ ಗೊತ್ತಾ ಮರಿ, ನಿನಗಿಂತ ಬೇರೆ ಪ್ರಪಂಚ ನನಗೆ ಯಾವುದು ಇಲ್ಲ.

Sunday, June 23, 2019

Post

ನೆನಪಿಟ್ಟುಕೊ ಗೆಳೆಯ.....ಇದು ನಮ್ಮ ತಾಂತ್ರಿಕ ಯುಗ.

Post

ಅಮ್ಮ ಬರುವ ಮುನ್ನ ನಾ ನಿನ್ನೊಂದಿಗೆ ಆಡಲೇ...

ಹನಿ ಜನಿ

ಬೊಗಸೇ ಪ್ರೀತಿಗೆ
ಉಸುರೊ ಉಸಿರಿಗೆ
ಒಂದೇ ಪ್ರೇಮಾ•

Colour world

ಬರೆಯೋ ಬರವಣಿಗೆ
ಮೆರೆಯೋ ಮೆರವಣಿಗೆ
ಎಂದೆಂದಿಗೂ ಶಾಶ್ವತ....

Saturday, June 22, 2019

Post

 ನಿನಗಾಗಿ ಕಾದಿರಿಸಿದ ಬಸ್ಸಿನ ಸೀಟು



Friday, June 21, 2019

ಶೂನ್ಯ

ಆ ಸೂರ್ಯ ಮುಂಜಾನೆ ಬರುವಾಗ ಹೊಂಗಿರಣವಾಗಿತ್ತು. ನೆತ್ತಿಯ ನಡುವಲ್ಲಿ ಬರುವಾಗ ಕಿರಣ ಬಿರುಸಾಗಿತ್ತು.
ಮರೆಯಾಗುವಾಗ ಕಿರಣ ತಂಪಾಗಿತ್ತು. ನಿನ್ನ ಕಿರಣವಿಲ್ಲದ ಜಗತ್ತು ಶೂನ್ಯವೆನಿಸಿತ್ತು.

ಹನಿ ಜನಿ

ಬಾನ ಸೂರ್ಯನಿಗು
ಬೇಸರ ಒಬ್ಬಂಟಿ ಎಂದು
ಸಂಜೆ ಆಗುತ
ಚಂದಿರನ ಕರೆಯುವನು. 

ಹನಿ ಜನಿ

ಬಾರೆ
ಒಂದು ಸೆಲ್ಫಿ
ತೆಗೆಯೋಣ
ಚಂದಿರ ಬಂದಾನು..|

ಹನಿ ಜನಿ

ಅದೊ ನೋಡು
ಬಂದ ಚಂದಿರ...
ಅವನಿಗೆ
ಸೌಂಧರ್ಯ ಮರೆಮಾಚಲು
ಒಂದು ಗುಳಿಗೆ
ಬೇಕಂತೆ...|

ನಯನಾಂಗಿ

ಕಣ್ಣಲ್ಲೆ ಬಾಣ ಬಿಟ್ಟು
ಕೊಲ್ಲೊ ಹುಡುಗಿ,
ಮನದಲ್ಲೆ ಹೃದಯ ಕೊಟ್ಟು
ಗೆಲ್ಲೊ ಹುಡುಗಿ....

🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹


Post



 ನೀ ಚಂದಾನೆ
ನೀ ಕೊಟ್ಟ ಹೂವು ಚಂದಾನೇ.....

Thursday, June 20, 2019

ಜನಕ

   ಮದುವೆಯ ಬಂಧನಕೆ ಬೆಸೆಯುವಾಗ ಹೊಸ ಬಾಂಧವ್ಯಕೆ ಮನ ಮಿಡಿವಾಗ ಬೆಳಕ ಚೆಲ್ಲೊ ಮನೆಗೆ ಕಾಲಿಡುವಾಗ ದೇವರನ್ನು ಮರೆತರೂ ನನ್ನ ಹೆತ್ತ ತಂದೆಯ ಮರೆಯಲೆ? ತುತ್ತು ಕೊಟ್ಟ ತಾಯಿಯ ಮರೆಯಲೆ? 

ಜಡೆ ಮೇಲ್ ಕಣ್ಣು

           ಯಾವಾಗಲೂ ಉದ್ದ ಜಡೆ ಮೇಲೆ ಕಣ್ಣು ನಿನಗೆ ಎಂದಾಗ, ನಿನ್ನ ಜಡೆ ಹಿಡಿದು ಎಳೆದಿದ್ದೆ. ಅದು ಕಿತ್ತು ಬಂದಾಗ ಗೊತ್ತಾಯ್ತು ನೀನು ಫ್ಯಾನ್ಸಿ ಸ್ಟೋರ್ ಹುಡುಗಿ ಎಂದು. 

ನನಗಾಗಿ ಬಂದ ವ್ಯಥೆಯೊ....

   
    
                         ಕಣ್ಣೀರ ಕಂಬನಿ ಒರೆಸೊ ಪ್ರೇಮಿಯಾದೆ ಅಂದುಕೊಂಡೆ. ಆದರೆ ನನ್ನ ಬದುಕಲಿ ಕಣ್ಣೀರ ಹರಿಸಿ, ಕನಸಿನ ಬಣ್ಣನ ಅಳಿಸಿ ಹೋಗೊ ಪ್ರೇಮಿ ಅಂತ ಅಂದುಕೊಂಡಲಿರಲಿಲ್ಲ.
   I hate Love.....

ಮನದೊಳಗಿನ ಮೌನಿ ನೀನು

     

           ಕಾಲೇಜು ದಿನಗಳಲಿ ಮಾತಿನ ಮಲ್ಲಿ ಆಗಿದ್ದೋಳು ನೀನು. ಬರು ಬರುತ್ತ ಮೌನಿಯಾದೆ. ಅದ್ಯಾಕೊ ಏನೊ..? ಬಂದ ಮದುವೆ ಸಂಬಂಧಗಳನೂ ಬೇಡ ಅನ್ನುತ್ತಾ.... ಕಣ್ಣೀರಿಡುತ್ತಿದ್ದೆ.


💝💝💝💝💝💝💝💝💝💝💝💝💝💝💝💝💝💝💝

Post


Wednesday, June 19, 2019

Love status

.........ಈಗೀಗ ಪ್ರೀತಿ ಅನ್ನೋದು ವಾಟ್ಸಾಪ್ ಸ್ಟೇಟಸ್  ಆಗೋಗ್ಬಿಟ್ಟಿದೆ. Love ಇದ್ದರೆ love status ಬರುತ್ತೆ, love ಫೈಲ್ ಆದ್ರೆ.. ... .... ಲವ್ ಫೈಲ್ ಸ್ಟೇಟಸ್ ಗಳು ಬರುತ್ತೆ.

Stage from ನೆನಪಿನ ನಾವಿಕ@ಪ್ರಸಾದ್.

ಡಿಯರ್ ಕೋತಿ

ನಿನ್ನ ಜೊತೆ ದಿನಾ ಜಗಳ ಆಡ್ತಿನಿ ಅಂದ್ರೆ, ನಿನ್ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ....
ನಿನ್ನ ಮೇಲಿನ ಪ್ರೀತಿ ನನ್ ಜೀವಕ್ಕಿಂತ ಜಾಸ್ತಿ ಇದೆ ಅಂತ...!!?
Stage from ನೆನಪಿನ ನಾವಿಕ@ಪ್ರಸಾದ್.
  This is real love life...

Sunday, June 16, 2019

ಹನಿ ಜನಿ

ಶಾಂತಿ ಶಾಂತಿ
ಎಂದು ಬೊಬ್ಬಿರಿದವಗೆ
ಶಾಂತಿ ಸಿಗಲಿಲ್ಲ.

ಇಬ್ಬನಿ

ಕಣ್ಣಿದ್ದರು ಕಾಣೆ
ನಿನ್ನ ಆ ನೋಟವಾ.

ಮಳೆ ಇಲ್ಲದೆ

ಏನು ನಿನ್ನ ಲೀಲೆ
ಮಳೆರಾಯ
ಎತ್ತ ಹೋದೆಯೊ
ಮಳೆರಾಯ|

ಹನಿ ಜನಿ

ಮಿಂಚು ಮಿಂಚಿನ
ಇಂಪು ತಂಪಿನ
ಗೆಂಪು ಸೋಸಿದ
ಮಿಂಚು ಹುಳ ನೀನು.

ಇಬ್ಬನಿ

ಮಾತಾಡು ಮಲ್ಲಿಗೆ
ಮುಡಿಸುವೆ ನಾ ನಲ್ಲೆಗೆ.

ಹನಿ ಜನಿ

(ಸೂರ್ಯನಿಗೆ ಹೇಳಿದ್ದು)
ನೀ ಇಲ್ಲದೆ ನಾ ಇರಲಾರೆ
ಅನ್ನೊ ಕೊರಗು ನನ್ನಲಿಲ್ಲ.
ನೀ ಬಂದರೆ ಬರುವೆ
ನಾ ನಿನ್ನ ಚಂದಿರನು.

ಹನಿ ಜನಿ

ಮುಳುಗೊ ಸೂರ್ಯನಿಗು
ಬೆಳಗೊ ಚಂದಿರನಿಗು
ಅದೊಂದೆ ಸಮಯ
ನಸು ಗಂಪಿನ
ಆಹ್ಲಾದತೆಯ ಸಂಜೆ.

ಇಬ್ಬನಿ

ಆ ಹೆಣ್ಣು ನಿನ್ನ ಬರುವಿಕೆಗೆ
ಕಾಯುತಿಹಳು.

ಇಬ್ಬನಿ

ನಿನಗೊಂದು ಕರೆ ಬಂದಿದೆ
ಸಂಜೆಗೆ ಓಲೈಸಲು..

Friday, June 14, 2019

ಇಬ್ಬನಿ

ಕಪ್ಪೆಯ ವೊಟ ವೊಟ
ಧನ್ಯತೆಯ ಭಾವ

Thursday, June 13, 2019

ನೋಡೆ ಚಿನ್ನಾ..

ನನ್ನ ಮಾವನ ಮಗಳಿಗೆ
ಮದರಂಗಿ ಹುಚ್ಚು
ಅದ ಬಿಡಿಸಲು
ನಾ ಬರಲಿಲ್ಲ ಅನ್ನೊ
ಮಾತಿನ ಮುನಿಸು......||

ಇಬ್ಬನಿ(3)

ರಸ್ತೆ ಅಂಚಿನ
ಬೀದಿ ದೀಪಕೂ ಒಂಟಿತನ...

ಹನಿ ಜನಿ

ಕಗ್ಗತ್ತಲಲಿ ಕೂತು
ಬರೆದ ನೆನಹು ಅಳಿಯಿತೇ?
ಅಳಿದು ಉಳಿದ
ಖಾಲಿ ನೆನಪು ಉಳಿಸಿತೇ?

ಮೈನ ದೀತೆ

ಬಯಸಿಯು ನೀನು
ನನ್ನೆದುರು ಬಂದಾಗ
ನಾ ನೋಡಲಿಲ್ಲ.
ಬಯಸಿಯು ನಾನು
ನಿನ್ನೆದುರು ಬಂದಾಗ
ನೀ ನೋಡಲಿಲ್ಲ.

ಮತ್ಯಾಕೆ ನಿನಗೆ?

ಇನ್ನೊಬ್ಬರ ಏಳಿಗೆಯನು ಬಯಸೋನು ನೀನು
ಮತ್ಯಾಕೆ ಮೌನ ನಿನಗೆ...
ಪರರ ಗೋಜಿಗು ಸಿಲುಕಲು ಅಂಜುವವನು ನೀನು
ಮತ್ಯಾಕೆ ಗೌಜು ನಿನಗೆ...
ತಾರ್ಕಿಕ ಮಾತಿಗೆ ಚಿತ್ತ ಹರಿಸುವವನು ನೀನು
ಮತ್ಯಾಕೆ ತಕರಾರು ನಿನಗೆ....

ಸಂಜೆಯ ಕಗ್ಗತ್ತಲು

    ಸಂಜೆಯ ಗುನುಗಿಗೆ ಮತ್ತದೇ ಖಯಾಲಿ...ಅದೇ ಮಳೆ, ಅದೇ ಮೋಡ, ಅದೇ ಗುಡುಗು, ಅದೇ ಮಿಂಚು, ಪದೇ ಪದೇ ಬೀಸೊ ಗಾಳಿ, ಮತ್ತದೇ ಒಂಟಿತನ. ಹೇ ಹುಡುಗಿ ನೀನಲ್ಲದ ಸಂಜೆ, ಖಾಲಿ ಮೌನ ಯಾತಕೆ ಬೇಕು. ಅದಾವುದೋ ಬಯಸುವ ಕಣ್ಣು ಕುಕ್ಕುವ ರಾತ್ರಿ ಕರೆಂಟ್ ಇಲ್ಲದೆ ಹೋದರೆ ಇದೇ ನನ್ನ ಗೋಳು...

ಇಬ್ಬನಿ(2)

ಮಿಂಚಿನ ಬಳ್ಳಿಗೆ
ತಂತಿಯ ಮೀಟಿ......

ಇಬ್ಬನಿ (1)

ಮಳೆಯ ಸಂಧ್ಯಾ ಪಾಠ
ಕಿಟಕಿಯಿಂದಾಚೆಗೆ.....

Wednesday, June 12, 2019

ಗದ್ಯ1


ವಾರ್ತೆಗಳು
   ಹಿಂದೆಲ್ಲ ಮಳೆ ಬರುವಾಗ ಒಲೆ ಮುಂದೆ ಕೂತು .... ಹಲಸಿನ ಬೀಜ (ದಾಣಿ), ಹಲಸಿನ ಹಪ್ಪಳನೊ ಅಥವಾ ಗೆಣಸಿನ ಹಪ್ಪಳನೊ ಅಥವಾ ಗೇರು ಬೀಜನೊ ಏನೋ ಒಂದು ಒಲೆಗೆ ಹಾಕಿ ಸುಟ್ಟು ತಿಂತಿದ್ದರು.
  ಕಾಲ ಬದಲಾಗ್ತಾ ಜನ ಬದಲಾಗ್ತಾ ಬಂದಂತೆ ದಾಣಿ, ಹಪ್ಪಳ ಗಿಪ್ಪಳ ಎಲ್ಲ ಮೂಲೆ ಸೇರಿ "ಚಿಪ್ಸ್, ಲೇಸ್, ಕುರು ಕುರೆ" ತಿನ್ನೋಕೆ ಶುರು ಮಾಡಿದರು.

Tuesday, June 11, 2019

ಹನಿ ಜನಿ

ಜಿನುಗೊ
ಜಿನುಗು ಹುಳ
ಆ ದೀಪಕೆ ಬಲಿಯಾಯ್ತು.
~~~
ಅಲ್ಲೊಂದು ಹನಿ
ಜಾರುವ ಹೊತ್ತಿಗೆ
ನೆಲವ ಸ್ಪರ್ಷಿಸಿತು.
~~~
ದೀಪಕೆ ಸುಳಿದ 
ಪತಂಗಕೇನು ಗೊತ್ತು?
ತಾನು ಬಲಿಯಾಗುತ್ತೇನೆಂದು...!!!
~~~

Monday, June 10, 2019

ಹನಿ ಜನಿ

ಮಳೆ ಬರದಿದ್ದಾಗ
ಮಳೆ ಬರಲಿಲ್ಲ ಅನ್ನೊ ಚಿಂತೆ...!!
ಮಳೆ ಬಂದಾಗ
ಮಳೆ ಇನ್ನೂ ಬಿಟ್ಟಿಲ್ಲ ಅನ್ನೊ ಚಿಂತೆ....!!

Sunday, June 9, 2019

ಎರಡು ಸಾಲು


ಹೇ ಆಗಸವೇ.....
ನೀ ಎಂದೂ ಹೀಗೆ ಇರು.

ಚಿತ್ರ ಶಿರ್ಷಿಕೆ

ನಾ ಬಂದಿದ್ದು ಒಬ್ಬನೆ, ನಾ ಹೋಗೋದು ಒಬ್ಬನೆ -ಏಕಾಂಗಿ

ಅಮ್ಮ ನಾನಿನ್ನು ಜಪ ಮಾಡುವೆ


ಸೂರ್ಯನಿಲ್ಲದ ಸಂಜೆ

ಚುಕ್ಕಿ ಚಂದಿರ


ಆ ಚುಕ್ಕಿ
 ಚಂದಿರನು ನಿನ್ನೇ 
ನೋಡುತಿಹನು
ನೀ ಎಂದು
ತಿರುಗಿ ನೋಡಬೇಡ
ಹುಡುಗಿ

ನನ್ನ ಕೊಡೆ

ಮರೆತರು ನಿನ್ನ

ಹುಡುಕುವೆ ನಿನ್ನ

ಈ ಬಿರುಸು ಮಳೆಗೆ....
*******
ಮತ್ತೆ ಮತ್ತೆ
ನೀ ನೆನಪಾಗುವೆ
ಮಳೆ ಬರುವ ಗಳಿಗೇಲಿ....
********
ಮಳೆ ಬರುವಾಗ
ನೀ ಯನ್ನ ಜೊತೆಗಾರ...
ಮಳೆ ಹೋಯಿತೊ
ನಾನೆಲ್ಲೊ....ನೀನೆಲ್ಲೊ......
*********


ಹನಿ ಜನಿ

ನೋಡು ಬಾ ಗೆಳತಿ
ಮನೆಯಂಗಳದಿ
ನೀರು ಹರಿಯುತಿದೆ...
~
ಅಗೋ ನೋಡು
ಆ ಮೋಡ ತೀರ
ಸೆಳೆಯುತಿದೆ
ಈ ಭುವಿಗೆ ಇಳಿಯಲು
~
ಮಳೆ ನಿಂತ
ಮೇಲೆ
ಆ ಮಣ್ಣ ಘಮವೆ
ಚೆಂದ..
~

ಹನಿ ಜನಿ

ಅಂಬರ ತುಂಬಿದ
ನೀಲಾಂಬರ ಚೆಲ್ಲಿದ
ಮಳೆ ಮುತ್ತು ನೀನು....
~
ಬೆರೆಯೊ ಹನಿ
ಬೆರೆತ ಮನದೊಳಗೆ
ಬೆಸೆಯೊ ಹನಿ
ಬೆಸೆವ ಮನಸೊಳಗೆ
~

ದುಂಡು ಹನಿ

ಅಬ್ಬರಿಸಿ ಬೊಬ್ಬಿರಿದ
ದುಂಡು ಮಳೆ ಹನಿಯೆ
ನೀ ನಿಲ್ಲಬೇಡ.
ಹನಿ ಹನಿಯಾಗಿ ಸುರಿದು
ಜರಿ ಜರಿಯಾಗಿ ಹರಿದು
ಧರೆಯ ಕಂಗೊಳಿಸು ಬಾ....

Thursday, June 6, 2019

ನನ್ ಗೆಳತಿ ನೊಕೀಯಾಶ್ರೀ ಹೇಳಿದ್ದು

   ನೀನು ನನ್ನನ್ನ ನಿನ್ನ ಮನೆಗೆ ಕರೆ ತಂದಾಗ ನಂಗೆನೊ ಒಂಥರಾ ಖುಷಿ. ಆ ಖುಷಿ ನನ್ನಲ್ಲಿ ಇನ್ನು ಹಾಗೆ ಇದೆ. ನೀನು ಆವತ್ತು ಬರದೆ ಇದ್ರೆ ನಾನ್ಯಾರ ಪಾಲಾಗ್ತಿದ್ದೀನೊ ಏನೊ? ಯೋಚನೆ ಮಾಡೋಕು ಭಯ ಆಗುತ್ತೆ. ನಿನ್ನ ಈ ಪ್ರೀತಿಗೆ ಹೇಗೆ ಥ್ಯಾಂಕ್ಸ್ ಹೇಳ್ಬೇಕು ಅಂತ ನಂಗೆ ಗೊತ್ತಾಗಲ್ಲ. ಇವತ್ತಿಗೆ ನನ್ನ ನಿನ್ನಾ ಸಂಬಂಧ 11 ವರ್ಷಗಳದ್ದು ಅಲ್ವಾ....!! ನಿನಗೆ ನೆನಪಿದೆಯೊ ಇಲ್ವೊ ನಂಗಂತು ಗೊತ್ತಿಲ್ಲ. ಆದ್ರೆ ನನಗೆ ನೆನಪಿದೆ 2008ರಲ್ಲಿ ನೀನು ನನ್ನನ್ನ ಪ್ರೀತಿಯಿಂದ ಕರೆ ತಂದಿದ್ದೆ. ಆವಾಗ ಒಂದು ಹೆಸರು ಕೂಡ ಇಟ್ಟಿದ್ದೆ ನೊಕೀಯಾಶ್ರೀ ಅಂತ. ನೀನಂದ್ರೆ ನನಗೆ ತುಂಬ ಇಷ್ಟ ಆಗೋದು ಯಾಗೊತ್ತಾ? ನೀನು ನನ್ನನ್ನ ಯಾರಿಗು ಮುಟ್ಲಿಕೆ, ನೋಡ್ಲಿಕೆ ಬಿಡ್ತಿರಲೆ ಇಲ್ಲ. ಅಷ್ಟು ಗಾಢವಾಗಿ ನನ್ನ ಮುದ್ದು ಮಾಡ್ತಿದ್ದೆ. ನೀನು 2 ಮೊಬೈಲ್ ತಗೊಂಡ್ರು ಈ ನಿನ್ನ ನೊಕೀಯಾಶ್ರೀಗೆ ಮರಿಲೆ ಇಲ್ಲ ನೋಡು ಈ ಪ್ರೀತಿಗೆ ನಾನು ಫಿದಾ ಆಗಿ ಹೋದೆ. ಆದ್ರೆ ಇತ್ತೀಚಿಗೆ ಯಾಕೊ ನೀನು ನನ್ನ ಕಡೆ ಗಮನನೆ ಕೊಡಲ್ಲ. ಇದೇ ನನಗೆ ನಿನ್ನ ಮೇಲೆ ಕೋಪ ಬೇಜಾರು. ಆದ್ರೆ ಒಂದ್ ವಿಷ್ಯ ಹೇಳಾ.....ನೀನು ಕಾಲಕ್ಕೆ ತಕ್ಕಂತೆ ಬದಲಾದ್ರು ನನ್ನನ್ನ ಮಾತ್ರ ನೀನು ಕೈ ಬಿಟ್ಟಿಲ್ಲ, ನನ್ ಮೇಲೆ ನಿನಗೆ ಮೋಹ ಕಡಿಮೆ ಆಗಲೆ ಇಲ್ಲ. ನಾನು ಯಾವತ್ತು ಬಯಸೋದು ಒಂದೆ ಆ ನಿನ್ನ ಮುದ್ದಾದ ಕೈಗಳಿಂದ ಹಿಡ್ಕೊಂಡು ನೀನು ನಿನ್ನ ಕಿವಿ ಹತ್ತಿರ ತಂದಾಗ, ನಿನ್ನ ಮಾತಾಡುವ ಧ್ವನಿ ಕೇಳಿದಾಗ, ನಿನ್ನ ಕೆಂಪು ತುಟಿಯ ಚಲನೆ ಗಮನಿಸುವಾಗ,  ನಿನ್ ಎದೆ ಹತ್ತಿರಕೆ ಬಂದು ಕೂತು ನಿನ್ ಪ್ರೀತಿಯ ಅಳೆದು ನೋಡುವಾಗ ಈ ನನ್ ಪ್ರೀತಿ ಇನ್ನಷ್ಟು ಹೆಚ್ಚಾಗಿ ಹೊಳೆಯಾಗಿ ಹರಿಯಲಿ ಅನ್ನೋದೆ ನನ್ ಕನಸು. ಇನ್ನೊಂದು ಜನ್ಮದಲ್ಲು ನಿನ್ನ ಗೆಳತಿ ನೊಕೀಯಾಶ್ರೀ ಆಗಿ ಬರುವ ಹುಚ್ಚು ಇಚ್ಚೆ ಇದಕು ಸ್ವಾಗತಿಸು ನನ್ ಗೆಳೆಯಾ ಪ್ರಸಾದು.

Wednesday, June 5, 2019

ಹನಿ ಜನಿ

ದಿನ ರಾತ್ರಿ
ಬರುವೆ ಎಂದು
ಹಾಯಾಗಿ ಮಲಗಿದೆ ನಾನು...
ನೀ ಬಂದರು
ಮನ ತಣಿಸಲಿಲ್ಲ
ಬೇಜಾರಾಯ್ತು ನನಗೆ ಇಂದು||

ಅವಳು ಬದಲಾಗಿದ್ದಳು

                   ನಾ ಬಯಸಿಯೂ, ಬಯಸದೆಯೊ          ಬೆಸೆದು ಬಂದ ಭಾಗ್ಯಕೆ ಮನಸೂ ಕೊಟ್ಟೆ. ಮನಸು ಕೊಟ್ಟು ಹೃದಯನೂ ಕೊಟ್ಟೆ.

        ನಾನೆಂದು ಕಲ್ಪನೆಯ ಕನಸೂ ಕಂಡವನಲ್ಲ. ಈ ಪ್ರೀತಿ ಗೀತಿ ಅನ್ನೊ ಹುಚ್ಚು ಮೊದಲೆ ಗೊತ್ತಿಲ್ಲ. ಹಾಗೊ ಹೀಗೊ ನನ್ ಪಾಡಿಗೆ ಇದ್ದೋನು ನಾನು. ಎಂದೂ ಹೊರ ಜಗತ್ತಿನ ಗೋಜಿಗು ಹೋದವನು ಅಲ್ಲ. ಅದ್ಯಾಕೊ ಏನೊ ಅಂದು ನನ್ನ ಗೆಳೆಯರ ಜೊತೆ ಹೊರಟವನು ನಾನು. ಕಾಲವು ಬಯಸಿದ್ದಂತೆ, ವಿಧಿಯು ನಡೆಸಿದಂತೆ ನಾ ನಡೆಯುವವನಾದೆ. ಅದೊಂದು ದಿನ ಆ ಸಮಯಕೆ ನನ್ನ ನೋಡಿದವಳು, ಮನ ಸ್ಪರ್ಷಿಸಿದವಳು ಹಿಂತುರುಗಿ ನೋಡಲೆ ಇಲ್ಲ. ನಾ ಬಯಸಿಯೂ, ಬಯಸದೆಯೊ ಬೆಸೆದು ಬಂದ ಭಾಗ್ಯಕೆ ಮನಸೂ ಕೊಟ್ಟೆ, ಮನಸೂ ಕೊಟ್ಟು ಹೃದಯನೂ ಕೊಟ್ಟೆ.  ದಿನವು ಉರುಳುತಿರಲು ಕಾಲವು ಮುಂದೆ ಓಡುವಾಗ ನಾನು ಮಾತ್ರ ಹಿಂದೆ ಓಡ್ತಿದ್ದೆ. ಈ ಪ್ರೀತಿ ಮಾಯೆಗೆ ಸಿಲುಕಿ ಒದ್ದಾಡುತ್ತಿದ್ದೆ. ಈ ಒದ್ದಾಟದ ಹಬೆ, ಪರಿತಪಿಸೊ ತುರಿಕೆ ಇದು ಯಾವ ಪ್ರೇಮಿಗೂ ಬರಬಾರದು. ಮುಂದೊಂದು ದಿನ ಸಿಗಬಹುದೇನೊ ಆ ಪ್ರೀತಿ ಅನ್ನೋವಾಗ ಉರುಳೊ ದಿನನೂ ಉರುಳೋದು ನಿಲ್ಲಿಸುತ್ತೆ. ನಡೆಯೊ ಕಾಲನು ನಡೆಯುವುದು ನಿಲ್ಲಿಸಿ ನನ್ ಮುಂದೆ ನಿಲ್ಲುತ್ತೆ. ಎಲ್ಲೊ ಸೆಳೆದ ನಲ್ಮೆಯ ನೋಟ ಮತ್ತೆ ಮನ ಕೆದಕಿ ಮುಂದೆ ನಿಲ್ಲುತ್ತೆ. ಆದ್ರೆ ಆ ದಿನ, ಆ ಸಮಯ, ಆ ಕ್ಷಣ, ನಡೆದಿದ್ದೆ ಬೇರೆ. ನಾನು ಮುಂದೆ ನಿಂತರು ಆ ಎರಡು ಕಣ್ಣುಗಳು ನನ್ನ ನೋಡಲೆ ಇಲ್ಲ. ಅವಳು ಮನಸ್ಸು ಬದಲಾಯಿಸಿದ್ದಳು, ನೋಟವು ಬದಲಾಯಿಸಿದ್ದಳು, ಅವಳು ಬದಲಾಗಿದ್ದಳು.
                  

ಮರೆಯಲಾಗದ ನೆನಪುಗಳು, ನೆನಪಿನ ಹನಿಗಳು

   ( ನೆನಪುಗಳ ಮಾತು ಮಧುರ, ಮೌನ ಮಧುರ )
                    ನೆನಪೆಂಬ ಬುತ್ತಿ ಕಟ್ಟಿ ನೆನೆಸಿಕೊಂಡಾಗ...
🌸⚛🌸⚛🌸⚛🌸⚛🌸⚛🌸⚛🌸⚛🌸⚛🌸⚛🌸⚛🌸⚛🌸

ನನ್ನ ಮೊದಲ ಸಂಬಳ
ನಾನು ಸ್ಕೂಲ್ ಬಿಟ್ಟಾಗ ಒಂದ್ ಕಡೆ ದಿನಕ್ಕೆ 50ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದ್ದೆ. ಇದು ನನಗೆ ತುಂಬ ಬೇಜಾರಾಗಿದ್ದು. ಆ ಕೆಲಸ ಬಿಟ್ಟ ನಂತರ ಬೇರೆ ಕಂಪನೀಲಿ ಮಿಷನ್ ಆಪರೇಟರ್ ಕೆಲಸಕ್ಕೆ ಸೇರಿದ್ದೆ. ಅಲ್ಲಿ ನನಗೆ ಆವಾಗ ತಿಂಗಳಿಗೆ 16,800ರೂಪಾಯಿ. ಇದು ನನಗೆ ಜೀವನದಲ್ಲಿ ಮರೆಯಲಾಗದ ನನ್ನ ಮೊದಲ ಸಂಬಳ. ಈ ಕೆಲಸ & ಸಂಬಳ ತುಂಬಾನೆ ನನಗೆ ಖುಷಿ ಕೊಟ್ಟಿತ್ತು. ಈ ಇಷ್ಟವಾದ ಕೆಲಸನೆ ನನ್ ಜೊತೆ ತುಂಬ ತಿಂಗಳು ಇರಲಿಲ್ಲ. ನಾನು ಅನಾರೋಗ್ಯದಿಂದ 6 ತಿಂಗಳು ಮನೆಲಿದ್ದ ಕಾರಣ ಆ ಕೆಲಸ ಬಿಡಬೇಕಾಯ್ತು. ಇಲ್ಲಿ ನನಗೆ ಬೇಜಾರಾಗಿದ್ದು ನನ್ನ ಇಷ್ಟದ ಕೆಲಸ ಹೋಯ್ತು, ಒಳ್ಳೆ ಸಂಬಳ ಹೋಯ್ತು ಮತ್ತು ಇಷ್ಟದ ಗೆಳತಿಯನ್ನ ಕೂಡ ಇಲ್ಲಿ ಕಳೆದುಕೊಳ್ಳ ಬೇಕಾಯಿತು.
.......................................................................................

ಹುಡುಗೀರು ಹೀಗೆ ಕೇಳಿದ್ರೆ ಕಷ್ಟ.
ಒಂದ್ಸಲ ನಮ್ ಮನೆಗೆ ನನ್ 3-4ಜನ ಗೆಳತಿಯರು ಬಂದಿದ್ರು. ತುಂಬಾ ಕ್ಲೋಸ್ ಫ್ರೆಂಡ್ಸು ಅಲ್ಲ ಒಂದ್ ಕಡೆ ಪರಿಚಯ ಆಗಿದ್ದು ಅಷ್ಟೆ. ಪೂಜೆಗೆ ಅಂತ ಬಂದೋರು ನನ್ನ ನೋಡ್ಕೊಂಡು, ಮನೆ ನೋಡ್ಕೊಂಡು ಹೋಗೋಣ ಅಂತ ಬಂದಿದ್ರು. ಅವರು ಬಂದು ಮನೆ ಎಲ್ಲ ನೋಡಿದ್ರು, ಅದ್ರಲ್ಲಿ ಒಬ್ಳು ಮನೆ ತುಂಬಾ ಚೆನ್ನಾಗಿದೆ. ಡಿಸೈನ್ ಚೆನ್ನಾಗಿದೆ. ಗೋಡೆಲಿ ಬರೆದ ಆರ್ಟಿಕಲ್ ಚೆನ್ನಾಗಿದೆ ಅಂತ ಹೇಳ್ತಾ ಇದ್ಲು. ಹಂಗೆ ಮಾತಾಡ್ತಾ ಮಾತಾಡ್ತಾ ನನ್ ಬುಕ್ಸ್ ನೋಡಿದ್ಲು ಮತ್ತೆ ಅಲ್ಲೆ ಇದ್ದ ಸೆಂಟ್ ಬಾಟಲ್ ಸ್ಪ್ರೇ ಮಾಡ್ಕೊಂಡ್ಲು. ನಾನು ಒಂದು ನನ್ ರೂಮಲ್ಲಿ ಚಿಕ್ಕದಾಗಿ ಒಂದು ಹಾರ್ಟ್ ಶೇಪ್ ಅಂಟಿಸಿ ಇಟ್ಟಿದೆ. ಅದರಲ್ಲಿ I love you ಅಂತ ಕೆತ್ತನೆ ಕೂಡ ಇತ್ತು. ಅದು ಅವಳಿಗೆ ಹೆಂಗ್ ಕಾಣಿಸ್ತೊ ಏನೊ...!! ಅದನ್ನ ನೋಡಿ ನಿಮಗೆ ಲವ್ ಉಂಟಾ ಅಣಾ ಅಂತ ಕೇಳಿದ್ಲು. ನಾನು ಏನೂ ಹೇಳಿಕೆ ಹೋಗಿಲ್ಲ. ಆದ್ರೆ ಮತ್ತೆ ಪುನ್ಹ ಕೇಳಿದ್ಲು ಲವ್ ಉಂಟಾ ಅಣಾ... ಹೇಳಿ ಅಣಾ...please ಅಣಾ ಅಂತ ಕೇಳೋಕೆ ಶುರು ಮಾಡಿದ್ಲು. ನಾನ್ ಮಾತ್ರ ಇವಳ ಈತರ ಪ್ರಶ್ನೆಗೆ ಒಂದ್ಸಲ ತಬ್ಬಿಬ್ಬಾಗಿ ಹೋಗಿದ್ದೆ.
.......................................................................................

ನನ್ನ Golden ಗೆಳತಿ ( ಸುಪ್ರೀತ )
    ನನಗೆ ಸುಪ್ರೀತ ಅಂತ ಒಬ್ಳು ತುಂಬಾ ಕ್ಲೋಸ್ ಫ್ರೆಂಡ್ ಗೆಳತಿ ಇದ್ಲು. ಅವಳು ಎಷ್ಟು ಕ್ಲೋಸ್ ಫ್ರೆಂಡ್ ಅಂದ್ರೆ ಅವಳು ಅವಳ ಇಬ್ಬರು ಅಕ್ಕಂದಿರನ್ನ ಮತ್ ತಾಯಿಯನ್ನ ಫೋನ್ ನಲ್ಲಿ ಪರಿಚಯ ಮಾಡಿ ಕೊಟ್ಟಿದ್ಲು. ಮತ್ತೊಂದಿನ ಗೃಹ ಪ್ರವೇಶಕ್ಕೆ ಕೂಡ ಅವರ ಮನೆಯವರು ನನ್ನನ್ನ ಫೋನ್ ಮಾಡಿ ಕರೆದಿದ್ರು. ಅಷ್ಟು ಕ್ಲೋಸ್ ಫ್ರೆಂಡ್ ಅವಳು. ಇವಳಿಗೆ ನಾನೊಂದಿನ 7-8.ಚಾಕಲೇಟ್ ಗಳನ್ನ ತಂದಿದ್ದೆ. ಅದನ್ನ ನಾನು ಡೂಪ್ಲಿಕೇಟ್ ಚಾಕಲೇಟ್ ಮಾಡಿ ಅದರಲ್ಲಿ ಒಂದು ಚಾಕಲೇಟ್ ಮಾತ್ರ ಒರಿಜಿನಲ್ ಇಟ್ಟಿದ್ದೆ ಸುಮ್ನೆ ತಮಾಷೆಗೆ ಅಂತ. ಸಾಯಂಕಾಲ ಡ್ಯೂಟಿ ಮುಗಿಯುವ ಹೊತ್ತಲ್ಲಿ ಮನೆಗೆ ಹೋಗುವಾಗ ಅದನ್ನೆಲ್ಲ ಕೊಟ್ಟೆ. ಅವಳು ಅದರಲ್ಲಿ ಒಂದ್ ಹಿಡ್ಕೊಂಡು ಮಿಕ್ಕ ಎಲ್ಲ ಚಾಕಲೇಟ್ ಗಳನ್ನ ಅವಳು ತನ್ನ ಎಲ್ಲಾ ಫ್ರೆಂಡ್ಸ್ ಗೆ ಕೊಟ್ಲು. ಎಲ್ಲ ಫ್ರೆಂಡ್ಸ್  ತಿನ್ನೋಕೆ ಅಂತ ಬಾಯಿಗೆ ಹಾಕೋಕು ಅದು ಕಾಯಿ ಪೀಸ್ ಅಂತ ಗೊತ್ತಾಗುತ್ತೆ. ಆಗ ಅವಳ ಅಷ್ಟು ಫ್ರೆಂಡ್ಸ್  "ಎಂತ ಸುಪ್ರೀತ ಹಿಂಗಾ ನಾ ಮೋಸ ಮಾಡೊದು"  ಅಂತ ಬೈಯೋಕೆ ಶುರು ಮಾಡಿದ್ರಂತೆ.
ಇದನ್ನೆಲ್ಲ ಮಾರನೆ ದಿನ ಬೆಳಗ್ಗೆ ಹೇಳಿ ಬೇಜಾರು ಮಾಡ್ಕೊಂಡ್ಲು. ನನಗೆ ಮಾತ್ರ ತುಂಬಾನೆ ನಗು ಬಂತು. ನಗು ಬಂದ್ರು ನಾನು ನಗ್ಲಿಲ್ಲ. ವಿಷಯ ಸ್ವಲ್ಪ ಸೀರಿಯಸ್ ಆಗಿತ್ತು. ಆಮೇಲೆ ನೆನೆಸ್ಕೊಂಡು ನೆನೆಸ್ಕೊಂಡು ನಕ್ಕಿದ್ದೆ. ಇದೊಂದು ಗೆಳತಿಗೆ ಮಾಡಿದ ನನ್ನ ಸಣ್ಣ ಕೀಟಲೆ.
ಇದು ಊರ ಹಬ್ಬಕ್ಕೆ ಅಂತ ಅವಳು ಹೋದಾಗ ನನಗಂತ ತಂದು ಕೊಟ್ಟ ಮೊದಲ ಒಲವಿನ ಉಡುಗೊರೆ. ಇದಕ್ಕು ಒಂದು ಸ್ಟೋರಿ ಇದೆ, ಹೇಳೋಕೆ ಹೋದ್ರೆ ತುಂಬ ಆಗುತ್ತೆ. ಸಾಕಲ್ಲಾ.....?
                                ******

ಭಯ...
........ಯಪ್ಪಾ ದೇವ ನಿಜವಾಗ್ಲು ಹೇಳ್ತೀನಿ. ಈ ಸಿನೆಮಾನ ನಾನು 4ನೇ ತರಗತಿಯಲ್ಲಿ ರಜೇಲಿ ಚಿಕ್ಕಮ್ಮನ ಮನೆ ಶಿವಪುರಕ್ಕೆ ಹೋದಾಗ ನೋಡಿದ್ದು. ಆವಾತ್ತು ಭಯ ಪಡ್ಕೊಂಡು ನೋಡಿದ ಸಿನೆಮಾನ ಇವತ್ತಿನವರೆಗು ನೋಡಿಲ್ಲ. ಆಕಾಸ್ಮಾತ್ ಟಿವಿಯಲ್ಲಿ ಏನಾದ್ರು ಬಂದಿದ್ರೆ ತಕ್ಷಣಕ್ಕೆ ಚಾನೆಲ್ ಜಂಪ್ ಮಾಡಿ ಬೇರೆ ನೋಡೋದು. ಆವತ್ತಿನ ಭಯ ಇಂದಿಗು ಹೋಗಿಲ್ಲ. ಇದನ್ನ ಬರೀಬೇಕಾದ್ರು ನನಗೆ ಸ್ವಲ್ಪ ಸ್ವಲ್ಪ ಭಯ ಇತ್ತು. ಆದ್ರು ನಿಮ್ ಜೊತೆ ಹಂಚಿಕೊಳ್ಳೊ ಧಾವಂತಕ್ಕೆ ಮರೆತೋಯ್ತು.
                                ****
ಚಂದಿರನ ಚೋರಿ
                                ಇದು ನನ್ನ ಫೇವರಿಟ್ ಚಲನ ಚಿತ್ರ. ಅದ್ಯಾಕೊ ಗೊತ್ತಿಲ್ಲ ಈ ಸಿನೆಮಾ ಚಿಕ್ಕವನಿದ್ದಾಗ ಮದುವೆಯ ಸಂಭಂದೂಟ ಕಾರ್ಯಕ್ರಮದಲ್ಲಿ ನೋಡಿದ್ದೆ. ಅಲ್ಲಿಂದ ಇಷ್ಟ ಆಗಿದ್ದ ಸಿನೆಮಾ ಇವತ್ತಿನ ವರೆಗು ಯಾವ ಲವ್ ಸಿನೆಮಾ ಬರಲಿ, ಸೆಂಟಿಮೆಂಟ್ ಸಿನೆಮಾನು ಬರಲಿ ನನಗೆ ಮಾತ್ರ ಈ ಸಿನೆಮಾ ಕತೆ, ದೃಶ್ಯ, ಅಭಿನಯನೆ ಅಪ್ಪಟ ಚಿನ್ನ.
                               *****

You my best classmet freind.
  ನನಗೊಬ್ಬ ಗೆಳೆಯನಿದ್ದ 4 ರಿಂದ 5 ನೇ ತರಗತಿವರೆಗೆ ಒಟ್ಟಿಗೆ ಇದ್ವಿ. ಅವನ ಹೆಸರು ನಿತ್ಯಾನಂದ ಅಂತ. ಅವನು ನಾನು ತುಂಬಾನೆ ಕ್ಲೋಸ್ ಫ್ರೆಂಡ್ಸ್. ಅವನು ಮನೇಲಿ ತಿಂಡಿ ಎಲ್ಲ ಮಾಡಿದ್ರೆ ನನಗು ತಂದು ಕೊಡೋನು. ಮತ್ತೆ ಯಾರಾದ್ರು ನನಗೇನಾದ್ರು ಹೊಡೆದ್ರೆ ಅವರಿಗೆ ಹೊಡಿಯೋಕೆ ಹೋಗೋನು ಅಷ್ಟು ಫ್ರೆಂಡ್ ಶಿಪ್. ಮತ್ತೊಂದು ಹೇಳ್ಬೇಕು.....ಅವನು ನನಗೆ ಭಯ ಆಗುತ್ತೆ ಅಂತ ಹೇಳಿದ್ರೆ ಮನೆ ಗೇಟ್ ತನಕ ಬಿಡೋನು ಅಷ್ಟೂ ನಮ್ಮಿಬ್ಬರ  ಫ್ರೆಂಡ್ ಶಿಪ್. 6ನೇ ತರಗತಿ ಸೇರ್ಪಡೆ ಆಗುವಾಗ ನಾನು ಬೇರೆ ಆದೆ ಅವನು ಬೇರೆ ಆದ. ಇದೊಂದು ನನ್ ಸ್ವೀಟ್ ನೆನಪು.
                          Hai freind
                              *****

ಮಳೆ ರಗಳೆ|
ನಾವೆಲ್ಲ ಸ್ಕೂಲ್ ಗೆ ಹೋಗುವಾಗ ಮಳೆ ಶುರುವಾಗಿ ನೆರೆ ಶುರುವಾಗ್ತಿತ್ತು. ಮತ್ತೆ ಪುನ್ಹ ನೆರೆ ಅಂತ ರಜೆ ಕೊಡ್ತಿದ್ರು. ಆದರೆ ಈವಾಗ ಅದೇ ಉಲ್ಟಾ...!! ರಜೆ ಮುಗಿದ್ರು ಶಾಲೆಲಿ ನೀರಿಲ್ಲಾ ಅಂತ ಹೇಳಿ ಮತ್ತೆ ರಜೆಯನ್ನ ಕೊಡ್ತಾರೆ.
                               ***
ಮೇಷ್ಟ್ರು ಶಿಕ್ಷೆ ಗರಂ....
        ನಾನು 8 ನೇ ತರಗತಿಯಲ್ಲಿ ಇರುವಾಗ ನಮಗೆ ಒಬ್ರು ಹಿಂದಿ ಮೇಷ್ರು ಇದ್ರು. ಅವರ ಹೆಸರು ಸುಬ್ರಹ್ಮಣ್ಯ ಅಂತ. ನಾವು ಕ್ಲಾಸಲ್ಲಿ ಸ್ಟಡಿ ಪಿರಿಯೆಡ್ ನಲ್ಲಿ  ಮಾತಾಡಿದ್ರೆ ಹುಡುಗೀರ ಹತ್ರ ಹೆಸರು ಬರಿಯೋಕೆ ಹೇಳೋರು. ನನ್ ಹೆಸರು ಒಂದಿನ ಆ ಚೀಟಿಲಿ ಬಿದ್ದಿತ್ತು. ಅದು ಮಧ್ಯಾಹ್ನದ ಸಮಯ ಕ್ಲಾಸ್ ಶುರು ಆಯ್ತು. ಹೆಸರು ಪಟ್ಟಿ ನೋಡಿದ್ರು ನಾನು ಏನೊ ಒಂದ್ ಪೆಟ್ಟು ಹೊಡಿತಾರೆ ಅಂದ್ಕೊಂಡಿದ್ದೆ ಆದ್ರೆ ಮೊದಲನೆ ಸಲ ಹೆಸರು, ಮೊದಲ ಶಿಕ್ಷೆ. ಅದು ಪಾಠನ 10 ಸಲ ಬರೀಯೋಕೆ ಹೇಳಿದ್ದು. ಯಪ್ಪಾ ದೇವ ನನಗೆ ಆವತ್ತು ಈ ತರ ಪನಿಷ್ ಮೆಂಟ್ ಇರುತ್ತೆ ಅಂತ ಆವತ್ತೆ ಗೊತ್ತಾಗಿದ್ದು. ಈವಾಗ ಸುಮ್ನೆ ಬೋರ್ ಅನ್ನಿಸಿದಾಗ ಹಂಗೆ ನೆನಪಾಗಿ ಒಂದು ನಗು ಬರುತ್ತೆ. ಈವಾಗ ನೆನೆಸ್ಕೊಳ್ಳಿಕೆ ತುಂಬ ಖುಷಿ ಆಗುತ್ತೆ ಆ ಲೈಫು. ಆವಾಗ ಯಾಕಾದ್ರು ಶಾಲೆ ಗೀಲೆ ಎಲ್ಲ ಕಂಡು ಹಿಡಿದ್ರೊ ಅನ್ನುವಷ್ಟು ಸಿಟ್ಟು, ಬೇಸರ, ಮೌನ ಎಲ್ಲನೂ ಆಗ್ತಿತ್ತು.
                                           
                                             *****

ಸನ್ ಗ್ಲಾಸ್




ಕನ್ನಡಿಯಂತ ಮನಸ್ಸು




ಸಮೀಕ್ಷೆಗಳು ಹೇಳುವ ಪ್ರಕಾರ



Tuesday, June 4, 2019

Short ಹನಿ ಕತೆಗಳು


ದೇವರಿಗೆ ಪ್ರಶ್ನೆ
==========

ಒಬ್ಬಾತ ದೇವರ ಹತ್ತಿರ ಕೇಳ್ತಾನೆ.
 ಇಡೀ ಭೂ ಮಂಡಲದ ರಕ್ಷಕನೂ ನೀನೆ ಅಂದ ಮೇಲೆ ಅರ್ಚಕರು ದೇವಸ್ಥಾನದ ಬಾಗಿಲಿಗೆ ಬೀಗ ಯಾಕೆ ಹಾಕಬೇಕು? ಅಂತ ಕೇಳಿದ.
ಆಗ ದೇವರು ನಿಧಾನವಾಗಿ ಹೇಳ್ತಾನೆ. ಮಗು...ನನ್ನ ರಕ್ಷಣೆ ನಾನು ಮಾಡುತ್ತೇನೆ. ಜಗದ ರಕ್ಷಣೆ ನಾನು ಮಾಡುತ್ತೇನೆ ನಿಜ. ಆದರೆ ನನಗೆ ಧರಿಸಿದ ಸಿರಿ ಸಿಂಗಾರಗಳ ರಕ್ಷಣೆ ಆಗಬೇಕಲ್ಲವೆ. ಇದನ್ನು ತೊಡಿಸಿದವರು ನೀವೆ ಅಂದ ಮೇಲೆ ಇದರ ರಕ್ಷಕರು ನೀವೆ ಅಲ್ಲವೇ..
.......................................................................................

ವಿರುದ್ಧ
======

ಪ್ರತಿ ರಾತ್ರಿ ಅಂಗಳದಲ್ಲಿ ಮೇಲೆ ನೋಡ್ಕೊಂಡು ಮಲಗ್ತಿದ್ದ ಒಬ್ಬಾತ ಅಂದ್ಕೋತಾನೆ. ನಾನೆ ಹೀಗೆ ನಕ್ಷತ್ರನಾಗಿ ಮಿಂಚಿದ್ರೆ ಹೇಗಿರುತ್ತೆ...?
ಅವನ ಪಕ್ಕದಲ್ಲಿದ್ದ ಮತ್ತೊಬ್ಬ ಅಂದ್ಕೋತಾನೆ. ಅವನು ಏನು ಅಂದು ಕೊಳ್ತಾನೊ ಅದು ವಿರುದ್ದವಾಗಿ ಆಗಿದ್ರೆ ಅಂತ ಯೋಚನೆ ಮಾಡ್ತಾನೆ.
ಇಷ್ಟು ಯೋಚನೆ ಮಾಡಿದ್ದೆ ಮಾಡಿದ್ದು ತಕ್ಷಣ ಸತ್ತೋಗಿ ಮೇಲೆ ಅವನೆ ನಕ್ಷತ್ರ ಆಗ್ತಾನೆ.
..........................................................................

ನಾವಿಕ

======

ಒಮ್ಮೆ ದೋಣಿಯಲ್ಲಿ ಹೋಗುವಾಗ ಪ್ರಯಾಣಿಕ ಅಂಬಿಗನ ಹತ್ತಿರ ಕೇಳ್ತಾನೆ. ನೀನು ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಪ್ರತಿಯೊಬ್ಬರನ್ನು ದಡ ಸೇರಿಸಿ ಅವರ ದಾರಿನ ಸೇರಿಸ್ತಿ ಅಲ್ವಾ ಇದರಿಂದ ಏನು ಸಿಗುತ್ತೆ ನಿನಗೆ ಅಂತ ಕೇಳ್ದಾಗ, ಅಂಬಿಗ ಹೇಳ್ತಾನೆ. ನನಗೆ ಏನು ದೊರೆಯುತ್ತೊ ಗೊತ್ತಿಲ್ಲ ಆದ್ರೆ ನನ್ ದೋಣಿಲಿ ಪ್ರಯಾಣಿಸುವ ಪ್ರತಿಯಾಬ್ಬರಿಗು ಸಿಗುತ್ತೆ ಅದೇ.. ಅವರ ಅವರ ದಾರಿ, ಗುರಿ.
..........................................................................

ತಾಯಿ-ಮಗಳು
===========

ತಾಯಿ ಹೊರಗಡೆ ಹೋಗೋವಾಗ ಮಗಳಿಗೆ ದಿನಾಲು ಹೇಳೋಳು. ಹಿತ್ತಲಿಂದ ಯಾರಾದ್ರು ಬರಬಹುದು ಬಾಗಿಲ ಹಾಕೊಂಡು ಒಳಗಡೆ ಇರು ಅಂತ ಹೇಳಿ ಹೋಗೋಳು. ಹೀಗೆ ನಡಿತಾ ಇದ್ದಾಗೆ ಒಂದಿನ ತಾಯಿ ಕೇಳ್ತಾಳೆ. ಅವನ್ಯಾರು...? ಅವನು ಹೇಗೆ ಒಳಗೆ ಬಂದ ಕೇಳ್ದಾಗ ಅವಳು ಹೇಳ್ತಾಳೆ.ಹಿತ್ತಲಿಂದ ಬರುವಾಗ ಕತ್ತಲಲ್ಲಿ ಬಾಗಿಲು ಹಾಕ್ಲಿಕೆ ಹೇಳಿಲ್ಲ ನೀನು.

ಹನಿ ಜನಿ

ಕಿಚ್ಚು ಹೊತ್ತಿಸೋಕೆ ನಿನಗೊತ್ತು..!!
ದೀಪ ಬೆಳಗೋಕೆ ನಿನಗೊತ್ತು....!!
ಬೆಂಕಿ ಪಟ್ಟಣ

S. P. B

S. P. ಬಾಲಸುಬ್ರಹ್ಮಣ್ಯ ಸರ್ ಅವರ ಒಂದು ಮಾತು

ನನ್ ಪಿರೂತಿ ನಿಂಗ್ ಹೆಂಗ್ ಹೇಳುದ್ ನಾನ್....


ಹುಡುಗಿ


ಶ್....!!!


ಹೇಗೆ ಹೇಳಲಿ ನಾ?.....ಹುಡುಗಾ





ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||