Wednesday, June 5, 2019

ಅವಳು ಬದಲಾಗಿದ್ದಳು

                   ನಾ ಬಯಸಿಯೂ, ಬಯಸದೆಯೊ          ಬೆಸೆದು ಬಂದ ಭಾಗ್ಯಕೆ ಮನಸೂ ಕೊಟ್ಟೆ. ಮನಸು ಕೊಟ್ಟು ಹೃದಯನೂ ಕೊಟ್ಟೆ.

        ನಾನೆಂದು ಕಲ್ಪನೆಯ ಕನಸೂ ಕಂಡವನಲ್ಲ. ಈ ಪ್ರೀತಿ ಗೀತಿ ಅನ್ನೊ ಹುಚ್ಚು ಮೊದಲೆ ಗೊತ್ತಿಲ್ಲ. ಹಾಗೊ ಹೀಗೊ ನನ್ ಪಾಡಿಗೆ ಇದ್ದೋನು ನಾನು. ಎಂದೂ ಹೊರ ಜಗತ್ತಿನ ಗೋಜಿಗು ಹೋದವನು ಅಲ್ಲ. ಅದ್ಯಾಕೊ ಏನೊ ಅಂದು ನನ್ನ ಗೆಳೆಯರ ಜೊತೆ ಹೊರಟವನು ನಾನು. ಕಾಲವು ಬಯಸಿದ್ದಂತೆ, ವಿಧಿಯು ನಡೆಸಿದಂತೆ ನಾ ನಡೆಯುವವನಾದೆ. ಅದೊಂದು ದಿನ ಆ ಸಮಯಕೆ ನನ್ನ ನೋಡಿದವಳು, ಮನ ಸ್ಪರ್ಷಿಸಿದವಳು ಹಿಂತುರುಗಿ ನೋಡಲೆ ಇಲ್ಲ. ನಾ ಬಯಸಿಯೂ, ಬಯಸದೆಯೊ ಬೆಸೆದು ಬಂದ ಭಾಗ್ಯಕೆ ಮನಸೂ ಕೊಟ್ಟೆ, ಮನಸೂ ಕೊಟ್ಟು ಹೃದಯನೂ ಕೊಟ್ಟೆ.  ದಿನವು ಉರುಳುತಿರಲು ಕಾಲವು ಮುಂದೆ ಓಡುವಾಗ ನಾನು ಮಾತ್ರ ಹಿಂದೆ ಓಡ್ತಿದ್ದೆ. ಈ ಪ್ರೀತಿ ಮಾಯೆಗೆ ಸಿಲುಕಿ ಒದ್ದಾಡುತ್ತಿದ್ದೆ. ಈ ಒದ್ದಾಟದ ಹಬೆ, ಪರಿತಪಿಸೊ ತುರಿಕೆ ಇದು ಯಾವ ಪ್ರೇಮಿಗೂ ಬರಬಾರದು. ಮುಂದೊಂದು ದಿನ ಸಿಗಬಹುದೇನೊ ಆ ಪ್ರೀತಿ ಅನ್ನೋವಾಗ ಉರುಳೊ ದಿನನೂ ಉರುಳೋದು ನಿಲ್ಲಿಸುತ್ತೆ. ನಡೆಯೊ ಕಾಲನು ನಡೆಯುವುದು ನಿಲ್ಲಿಸಿ ನನ್ ಮುಂದೆ ನಿಲ್ಲುತ್ತೆ. ಎಲ್ಲೊ ಸೆಳೆದ ನಲ್ಮೆಯ ನೋಟ ಮತ್ತೆ ಮನ ಕೆದಕಿ ಮುಂದೆ ನಿಲ್ಲುತ್ತೆ. ಆದ್ರೆ ಆ ದಿನ, ಆ ಸಮಯ, ಆ ಕ್ಷಣ, ನಡೆದಿದ್ದೆ ಬೇರೆ. ನಾನು ಮುಂದೆ ನಿಂತರು ಆ ಎರಡು ಕಣ್ಣುಗಳು ನನ್ನ ನೋಡಲೆ ಇಲ್ಲ. ಅವಳು ಮನಸ್ಸು ಬದಲಾಯಿಸಿದ್ದಳು, ನೋಟವು ಬದಲಾಯಿಸಿದ್ದಳು, ಅವಳು ಬದಲಾಗಿದ್ದಳು.
                  

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||