Thursday, June 6, 2019

ನನ್ ಗೆಳತಿ ನೊಕೀಯಾಶ್ರೀ ಹೇಳಿದ್ದು

   ನೀನು ನನ್ನನ್ನ ನಿನ್ನ ಮನೆಗೆ ಕರೆ ತಂದಾಗ ನಂಗೆನೊ ಒಂಥರಾ ಖುಷಿ. ಆ ಖುಷಿ ನನ್ನಲ್ಲಿ ಇನ್ನು ಹಾಗೆ ಇದೆ. ನೀನು ಆವತ್ತು ಬರದೆ ಇದ್ರೆ ನಾನ್ಯಾರ ಪಾಲಾಗ್ತಿದ್ದೀನೊ ಏನೊ? ಯೋಚನೆ ಮಾಡೋಕು ಭಯ ಆಗುತ್ತೆ. ನಿನ್ನ ಈ ಪ್ರೀತಿಗೆ ಹೇಗೆ ಥ್ಯಾಂಕ್ಸ್ ಹೇಳ್ಬೇಕು ಅಂತ ನಂಗೆ ಗೊತ್ತಾಗಲ್ಲ. ಇವತ್ತಿಗೆ ನನ್ನ ನಿನ್ನಾ ಸಂಬಂಧ 11 ವರ್ಷಗಳದ್ದು ಅಲ್ವಾ....!! ನಿನಗೆ ನೆನಪಿದೆಯೊ ಇಲ್ವೊ ನಂಗಂತು ಗೊತ್ತಿಲ್ಲ. ಆದ್ರೆ ನನಗೆ ನೆನಪಿದೆ 2008ರಲ್ಲಿ ನೀನು ನನ್ನನ್ನ ಪ್ರೀತಿಯಿಂದ ಕರೆ ತಂದಿದ್ದೆ. ಆವಾಗ ಒಂದು ಹೆಸರು ಕೂಡ ಇಟ್ಟಿದ್ದೆ ನೊಕೀಯಾಶ್ರೀ ಅಂತ. ನೀನಂದ್ರೆ ನನಗೆ ತುಂಬ ಇಷ್ಟ ಆಗೋದು ಯಾಗೊತ್ತಾ? ನೀನು ನನ್ನನ್ನ ಯಾರಿಗು ಮುಟ್ಲಿಕೆ, ನೋಡ್ಲಿಕೆ ಬಿಡ್ತಿರಲೆ ಇಲ್ಲ. ಅಷ್ಟು ಗಾಢವಾಗಿ ನನ್ನ ಮುದ್ದು ಮಾಡ್ತಿದ್ದೆ. ನೀನು 2 ಮೊಬೈಲ್ ತಗೊಂಡ್ರು ಈ ನಿನ್ನ ನೊಕೀಯಾಶ್ರೀಗೆ ಮರಿಲೆ ಇಲ್ಲ ನೋಡು ಈ ಪ್ರೀತಿಗೆ ನಾನು ಫಿದಾ ಆಗಿ ಹೋದೆ. ಆದ್ರೆ ಇತ್ತೀಚಿಗೆ ಯಾಕೊ ನೀನು ನನ್ನ ಕಡೆ ಗಮನನೆ ಕೊಡಲ್ಲ. ಇದೇ ನನಗೆ ನಿನ್ನ ಮೇಲೆ ಕೋಪ ಬೇಜಾರು. ಆದ್ರೆ ಒಂದ್ ವಿಷ್ಯ ಹೇಳಾ.....ನೀನು ಕಾಲಕ್ಕೆ ತಕ್ಕಂತೆ ಬದಲಾದ್ರು ನನ್ನನ್ನ ಮಾತ್ರ ನೀನು ಕೈ ಬಿಟ್ಟಿಲ್ಲ, ನನ್ ಮೇಲೆ ನಿನಗೆ ಮೋಹ ಕಡಿಮೆ ಆಗಲೆ ಇಲ್ಲ. ನಾನು ಯಾವತ್ತು ಬಯಸೋದು ಒಂದೆ ಆ ನಿನ್ನ ಮುದ್ದಾದ ಕೈಗಳಿಂದ ಹಿಡ್ಕೊಂಡು ನೀನು ನಿನ್ನ ಕಿವಿ ಹತ್ತಿರ ತಂದಾಗ, ನಿನ್ನ ಮಾತಾಡುವ ಧ್ವನಿ ಕೇಳಿದಾಗ, ನಿನ್ನ ಕೆಂಪು ತುಟಿಯ ಚಲನೆ ಗಮನಿಸುವಾಗ,  ನಿನ್ ಎದೆ ಹತ್ತಿರಕೆ ಬಂದು ಕೂತು ನಿನ್ ಪ್ರೀತಿಯ ಅಳೆದು ನೋಡುವಾಗ ಈ ನನ್ ಪ್ರೀತಿ ಇನ್ನಷ್ಟು ಹೆಚ್ಚಾಗಿ ಹೊಳೆಯಾಗಿ ಹರಿಯಲಿ ಅನ್ನೋದೆ ನನ್ ಕನಸು. ಇನ್ನೊಂದು ಜನ್ಮದಲ್ಲು ನಿನ್ನ ಗೆಳತಿ ನೊಕೀಯಾಶ್ರೀ ಆಗಿ ಬರುವ ಹುಚ್ಚು ಇಚ್ಚೆ ಇದಕು ಸ್ವಾಗತಿಸು ನನ್ ಗೆಳೆಯಾ ಪ್ರಸಾದು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||