ಎಕ್ಸಾಮ್ ರಿಸಲ್ಟ್ ಅಂದಾಕ್ಷಣ ನನ್ಗೆ......ನಾನು exam ಬರೆದ ಘಟನೆ ನೆನ್ಪಾಯ್ತು.
ನಾನೇನು ದೊಡ್ಡ ಕತೆ ರೀತಿಲಿ ಹೇಳಲ್ಲ, ಚಿಕ್ಕದಾಗಿ ಚೊಕ್ಕವಾಗಿ ನಿಮ್ಮ ಮುಂದೆ ಇಡ್ತಿನಿ. ಯಾಕಂದ್ರೆ ಕತೆ - ಗಿತೆ ಎಲ್ಲ ಕೇಳೋಕೆ ಈಗೆಲ್ಲ ಅಷ್ಟೊಂದು ಪೇಷೆನ್ಸ್ ಇರಲ್ಲ ನೋಡಿ. ಅದ್ರಿಂದ ಶೋರ್ಟ್ ಆಗಿ ಹೇಳ್ತಿನಿ. ಹಾಗೆ ನಿಮ್ಮ storyನು ಬರೀರಿ.
ನಾನು ಪರೀಕ್ಷೆ ಬರೆಯುವಾಗ ನನ್ ಹಿಂದ್ಗಡೆ ಪ್ರಸನ್ನ ಅಂತ ನನ್ ಫ್ರೆಂಡ್ ಇದ್ದ. ಅವನು ನನಗೆ ಗೊತ್ತಿಲ್ಲದ ಉತ್ತರಗಳನ್ನ ಅವನು ಹೇಳೋದು, ಅವನಿಗೆ ಗೊತ್ತಿಲ್ಲದ ಉತ್ತರಗಳನ್ನ ನಾನು ಹೇಳ್ತಿದ್ದೆ... ಅಂದ್ರೆ ಉತ್ತರ ಪತ್ರಿಕೆನ ತೋರಿಸ್ತಿದ್ದೆ. ಹಾಗೆ ಹೀಗೆ ಅಂತ 4 ಪರೀಕ್ಷೆನು ಬರೆದೆ, ಆದ್ರೆ 5ನೇ ಪರೀಕ್ಷೆ ಬರೀವಾಗ ನಾನು ಅವನಿಗೆ ಉತ್ತರಗಳನ್ನ ತೋರಿಸ್ತಿದ್ದೆ. ಅವನು ಹಾಗೆ ಬರೀತಿದ್ದ. ಹೀಗೆ ಬರೀತಾ ಇರ್ಬೇಕಾದ್ರೆ ಅವನು ಗಟ್ಟಿಯಾಗಿ ಶು್....ಶು್....ಕಾಣ್ಸಲ್ಲ ಮರೆ ಅಂತ ಸರ್ ಎದುರುಗಡೆನೆ ಹೇಳ್ದ .... ನನ್ಗೆ ಆವಾಗ ಅನಿಸ್ತು ಯಾಕಪ್ಪ ನೋಡ್ಕೊ ಬರೆಯುವ ಸಹವಾಸ ಮಾಡ್ಬೇಕಿತ್ತು ಅಂತ ಮನಸಲ್ಲೆ ಅಂದ್ಕೊಂಡೆ. ಒಂದ್ಕಡೆ ಭಯನು ಶುರುವಾಗೊಯ್ತು.
ಸರ್ ಆವಾಗ ಎಲ್ಲರ ಕಡೆ ಕಣ್ ಹಾಯ್ಸೋಕೆ ಶುರು ಮಾಡಿದ್ರು. ಯಾರದು? ಕರೆದಿದ್ದು ಅಂತ ಕೇಳಿದ್ರು. ಎಲ್ರು ಸುಮ್ನಿದ್ರು ನಾವಿಬ್ರು ಕಳ್ರ ಹಾಗೆ ತಲೆ ತಗ್ಗಿಸ್ಕೊಂಡು ನಮ್ ಪಾಡಿಗೆ ಬರೆಯೋಕೆ ಶುರು ಮಾಡಿದ್ವಿ. ಅಲ್ಲೆ ಲಾಸ್ಟ್ ಮತ್ತೆ ಬಾಕಿ ಪರೀಕ್ಷೆಗಳನ್ನ ಕೇಳಿ ಕೇಳಿ ಬರೀಯೋಕೆ ಹೋಗಿಲ್ಲ. ಪಾಸ್ ಆದ್ರು ಆಗ್ಲಿ ಫೇಲ್ ಆದ್ರು ಆಗ್ಲಿ ಅಂತ ಗೊತ್ತಿದ್ದು ಬರೆದೆ.
ಇನ್ನು ಉಂಟು.....ಹೇಳೋಕೆ ಹೋದ್ರೆ ಉದ್ದ ಕತೆ ಆಗುತ್ತೆ.
Thank you Prasanna........my friend
ಮತ್ತೆ ನೆನಪಲ್ಲಿ ನೀನು.....ಈ ನೆನಪಿನ ನಾವಿಕನ ಮನದಲ್ಲಿ.

No comments:
Post a Comment