ನಾವೆಲ್ಲ ಶಾಲೆಗೆ ರಜೆ ಸಿಕ್ತು ಅಂದ್ರೆ ಅಜ್ಜಿ ಮನೆ, ಚಿಕ್ಕಿ ಮನೆ, ಅಂತ ತಿರುಗಾಟದ ಮೇಳ ನಮ್ಮದೆಲ್ಲ ಆವಾಗ ಶುರು ಆಗ್ತಿತ್ತು ಅಲ್ವಾ. ಆದ್ರೆ ಈವಾಗೆಲ್ಲ ಈ ಮೇಳಗಳೆಲ್ಲ ತುಂಬ ಕಡಿಮೆನೆ, ನಂಗತು ಇನ್ನು ನೆನಪಿದೆ ನಾನಾವಾಗ 2 ನೇ ತರಗತಿಯಲ್ಲಿದ್ದೆ, ಶಾಲೆ ರಜೆ ಸಿಕ್ಕಿದ್ರೆ ಸಾಕು ಅಂತ ಕಾಯ್ತಾ ಇರೋದು. ರಜೆ ಬಂದಿದ್ದೆ ತಡ ಅಜ್ಜಿನ ಕಾಡ್ಸಿ ಪೀಡಿಸಿ ನಾವೆಲ್ಲ ಚಿಕ್ಕಮ್ಮನ ಮನೆಗಂತ ಹೋಗೋದು. ಇದು ನಮ್ಗೆಲ್ಲ ಆವಾಗ ತುಂಬ ಖುಷಿ ಕೊಡೋದು. ಇದು ನನ್ಗೆ ಈವಾಗ ನೆನಪಾಗೋದು ಯಾಕಂದ್ರೆ ಈವಾಗ ಶಾಲೆಗೆಲ್ಲ ರಜೆ ಶುರು ಆಯ್ತು ನೋಡಿ ಹಂಗೆ ನೆನ್ಪಾಯ್ತು.
ಮನೆ ಆಟ ಆಡೋದು, ಅಂಗಡಿ ಆಟ ಆಡೋದು, ಗಾಡಿ ಆಟ ಆಡೋದು ಹೀಗೆ ಕ್ರಿಕೆಟ್ ಆಟವೊಂದು ಬಿಟ್ಟು ಮಿಕ್ಕ ಆಟಗಳೆಲ್ಲ ಖುಷಿಯಿಂದ ಆಡ್ತಿದ್ದೆ. ಇದು ಈವಾಗ ಬೋರಾದಾಗ ಮೆಲುಕು ಹಾಕಿದ್ರೆ ನನ್ ತುಟಿ ಮೇಲೆ ಒಂದು ಸಣ್ಣಗೆ ನಗು ಬರುತ್ತೆ.
ಮುಗ್ಧ ಮನಸಿನ ಆ ಸಣ್ಣ ವಯಸ್ಸಿನ ಸಣ್ಣ ಲೈಫು ಎಷ್ಟು ಚೆನ್ನ ಅಲ್ವಾ?!.....ಆ ಲೈಫ್ ಅನ್ನೋದು ಹಂಗೆ ಇದ್ರೆ.....
ಹಂಗೆ ಒಮ್ಮೆ ನಿಮ್ಮ ಲೈಫ್ ನ ಕ್ಯಾಸೆಟ್ ನ ಹಾಗೆ ಒಮ್ಮೆ ರಿವೈಂಡ್ ಮಾಡಿ ನೋಡುವ.
ಮತ್ತೆ ಸದಾ ನೆನಪಿನೊಂದಿಗೆ.......ನಿಮ್ಮ ನೆನಪಿನ ನಾವಿಕ ಪ್ರಸಾದ್.🖍

No comments:
Post a Comment