ನಿನ್ನ ಕೈ ಹಿಡಿದು ನಡೆಸಿದ ಆ ನನ್ನ ನೆನಪು.......ಕಾಲು ಸಂಕದಿ ನೀನು ಕಾಲು ಜಾರಿ ಬಿದ್ದ ಮತ್ತದೆ ನೆನಪು, ನನ್ನ ನಿನ್ನ ತೆನೆ ಭರಿತ ಪ್ರೇಮ ಭರಿತ ಗದ್ದೆಯಲಿ ಕೆಸರಾಟದ ಆ ಹಸಿ ಹಸಿ ನೆನಪು, ಆ ಸೂರ್ಯಸ್ತದಿ ಝರಿ ದಂಡೆ ಮೇಲೆ ನಿನ್ನ ಕೈ ಬೆರಳು ಹಿಡಿದು ನಿಂತು ಆ ಸೂರ್ಯನನ್ನು ತೋರಿಸಿ ನಿನ್ನ ಕೆನ್ನೆಗೆ ಮುತ್ತೊಂದು ನೀಡಿದ ಆ ಸೊಗಸು, ಅದೇ ತಿಳಿ ಸಂಜೆ ಹೊತ್ತಲ್ಲಿ ನನಗಾಗಿ ನೀನು ಕಾದು ನನ್ನ ಕಿವಿ ಹಿಂಡಿದ ಒಂದು ನೆನಪು, ಶಾಲೆಗೆ ಜೊತೆಯಾಗಿ ಹೋದ ನೆನಪು, ಈವಾಗ ನಿನ್ನ ನೆನಪನ್ನು ಬರೆಯುವಾಗಲೂ ಮತ್ತದೆ ಸವಿ ಸವಿ ನೆನಪು.......
ಈವಾಗಿನ ನೆನಪಿನ ಹನಿಗಿಂತ, ಹಳೆ ನೆನಪಿನ ಹನಿಗಳು ಎಷ್ಟು ಚೆನ್ನ ಅಲ್ವಾ? .........ಏನಂತಿಯಾ? ಚೆಲುವೆ ನೀನು.
ಈವಾಗಿನ ನೆನಪಿನ ಹನಿಗಿಂತ, ಹಳೆ ನೆನಪಿನ ಹನಿಗಳು ಎಷ್ಟು ಚೆನ್ನ ಅಲ್ವಾ? .........ಏನಂತಿಯಾ? ಚೆಲುವೆ ನೀನು.
No comments:
Post a Comment