ಕಾನನದಲಿ ವಿುನುಗೊ ಚುಕ್ಕಿ
ಮರೆಯಾದಾಗ|
ರವಿಯ ಹೊಂಗಿರಣ ಭುವಿಗೆ
ಇಳಿದಾಗ|
ತಂಪು ಚಳಿಯ ಮರೆತು ದೇವ ಧ್ಯಾನದಲಿ
ಮೈ ಮರೆತಾಗ|
ಆಗ ತಾನೆ ಚಿಂವ್ ಗುಟ್ಟಿ ಎಬ್ಬಿಸಿದ ಹಕ್ಕಿ
ಮರೆಯಾದಾಗ|
ಝರಿ ಬಂಡೆಯ ನೀರ ಝಳಕೆ
ಕಿವಿಯೊಡ್ಡಿದಾಗ|
ದೇವ ಪೂಜಿತ ಘಂಟೆ ಆಸ್ಥಾನದಲಿ
ಮೊಳಗಿದಾಗ|
ಮುದ್ದು ಮಡದಿ ಮುಂಜಾನೆ ಹೊತ್ತಲ್ಲಿ ಕಣ್ಣೆದುರು
ನಿಂತಾಗ|
ಈ ಪುಣ್ಯ ಲಭಿಸಿದ ಜೀವಕೆ ಮತ್ತೆ ಸ್ವರ್ಗ ಸಿಗುವುದೇನೊ.
No comments:
Post a Comment