Tuesday, January 15, 2019

ನನ್ನ ಮುದ್ದಿನ ಬಾವ ( ಮಾವನ ಮಗ )

ಎಲೆ ಮರೆಯ ಹಿಂದೆ
ಅವಿತಿದ್ದ ಕಿರಣದಂತೆ....
ನನ್ನ ಬಾವನ ಪ್ರೀತಿ
ನಿಜ ತಿಳಿಯಲಿಲ್ಲ....
ವಸಂತ ಮಾಸವು 
ನೆನೆ ನೆನೆದು ನೆನೆದಾಗ....
ನಮ್ಮೂರ ಹಬ್ಬಕೆ 
ನನಗೊಂದು ಸೀರೆ ತಂದಾನು.....|
ಎಳ್ಳು ಬೆಲ್ಲದ ಸಂಕ್ರಾಂತಿ
ಹಬ್ಬಕೆ.....
ಬೆಲ್ಲದ ಪ್ರೀತಿಯ ಕೊಟ್ಟು
ನನ್ನ ಕೈ ತುತ್ತು ತಿಂದಾನು....|
ನೀಲ ಭಾಸ್ಕರನು
ಸಂಜೆ ಮರೆಯಾದಂತೆ.......
ನನ್ನ ಬಾವ ಟಾಟಾ ಹೇಳಿ
ಊರಿಗೆ ಹೊರಟಾನು.....|


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||