( ನೆನಪುಗಳ ಮಾತು ಮಧುರ, ಮೌನ ಮಧುರ )
ನೆನಪೆಂಬ ಬುತ್ತಿ ಕಟ್ಟಿ ನೆನೆಸಿಕೊಂಡಾಗ...
🌸⚛🌸⚛🌸⚛🌸⚛🌸⚛🌸⚛🌸⚛🌸⚛🌸⚛🌸⚛🌸⚛🌸
ನನ್ನ ಮೊದಲ ಸಂಬಳ
ನಾನು ಸ್ಕೂಲ್ ಬಿಟ್ಟಾಗ ಒಂದ್ ಕಡೆ ದಿನಕ್ಕೆ 50ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದ್ದೆ. ಇದು ನನಗೆ ತುಂಬ ಬೇಜಾರಾಗಿದ್ದು. ಆ ಕೆಲಸ ಬಿಟ್ಟ ನಂತರ ಬೇರೆ ಕಂಪನೀಲಿ ಮಿಷನ್ ಆಪರೇಟರ್ ಕೆಲಸಕ್ಕೆ ಸೇರಿದ್ದೆ. ಅಲ್ಲಿ ನನಗೆ ಆವಾಗ ತಿಂಗಳಿಗೆ 16,800ರೂಪಾಯಿ. ಇದು ನನಗೆ ಜೀವನದಲ್ಲಿ ಮರೆಯಲಾಗದ ನನ್ನ ಮೊದಲ ಸಂಬಳ. ಈ ಕೆಲಸ & ಸಂಬಳ ತುಂಬಾನೆ ನನಗೆ ಖುಷಿ ಕೊಟ್ಟಿತ್ತು. ಈ ಇಷ್ಟವಾದ ಕೆಲಸನೆ ನನ್ ಜೊತೆ ತುಂಬ ತಿಂಗಳು ಇರಲಿಲ್ಲ. ನಾನು ಅನಾರೋಗ್ಯದಿಂದ 6 ತಿಂಗಳು ಮನೆಲಿದ್ದ ಕಾರಣ ಆ ಕೆಲಸ ಬಿಡಬೇಕಾಯ್ತು. ಇಲ್ಲಿ ನನಗೆ ಬೇಜಾರಾಗಿದ್ದು ನನ್ನ ಇಷ್ಟದ ಕೆಲಸ ಹೋಯ್ತು, ಒಳ್ಳೆ ಸಂಬಳ ಹೋಯ್ತು ಮತ್ತು ಇಷ್ಟದ ಗೆಳತಿಯನ್ನ ಕೂಡ ಇಲ್ಲಿ ಕಳೆದುಕೊಳ್ಳ ಬೇಕಾಯಿತು.
.......................................................................................
ಹುಡುಗೀರು ಹೀಗೆ ಕೇಳಿದ್ರೆ ಕಷ್ಟ.
ಒಂದ್ಸಲ ನಮ್ ಮನೆಗೆ ನನ್ 3-4ಜನ ಗೆಳತಿಯರು ಬಂದಿದ್ರು. ತುಂಬಾ ಕ್ಲೋಸ್ ಫ್ರೆಂಡ್ಸು ಅಲ್ಲ ಒಂದ್ ಕಡೆ ಪರಿಚಯ ಆಗಿದ್ದು ಅಷ್ಟೆ. ಪೂಜೆಗೆ ಅಂತ ಬಂದೋರು ನನ್ನ ನೋಡ್ಕೊಂಡು, ಮನೆ ನೋಡ್ಕೊಂಡು ಹೋಗೋಣ ಅಂತ ಬಂದಿದ್ರು. ಅವರು ಬಂದು ಮನೆ ಎಲ್ಲ ನೋಡಿದ್ರು, ಅದ್ರಲ್ಲಿ ಒಬ್ಳು ಮನೆ ತುಂಬಾ ಚೆನ್ನಾಗಿದೆ. ಡಿಸೈನ್ ಚೆನ್ನಾಗಿದೆ. ಗೋಡೆಲಿ ಬರೆದ ಆರ್ಟಿಕಲ್ ಚೆನ್ನಾಗಿದೆ ಅಂತ ಹೇಳ್ತಾ ಇದ್ಲು. ಹಂಗೆ ಮಾತಾಡ್ತಾ ಮಾತಾಡ್ತಾ ನನ್ ಬುಕ್ಸ್ ನೋಡಿದ್ಲು ಮತ್ತೆ ಅಲ್ಲೆ ಇದ್ದ ಸೆಂಟ್ ಬಾಟಲ್ ಸ್ಪ್ರೇ ಮಾಡ್ಕೊಂಡ್ಲು. ನಾನು ಒಂದು ನನ್ ರೂಮಲ್ಲಿ ಚಿಕ್ಕದಾಗಿ ಒಂದು ಹಾರ್ಟ್ ಶೇಪ್ ಅಂಟಿಸಿ ಇಟ್ಟಿದೆ. ಅದರಲ್ಲಿ I love you ಅಂತ ಕೆತ್ತನೆ ಕೂಡ ಇತ್ತು. ಅದು ಅವಳಿಗೆ ಹೆಂಗ್ ಕಾಣಿಸ್ತೊ ಏನೊ...!! ಅದನ್ನ ನೋಡಿ ನಿಮಗೆ ಲವ್ ಉಂಟಾ ಅಣಾ ಅಂತ ಕೇಳಿದ್ಲು. ನಾನು ಏನೂ ಹೇಳಿಕೆ ಹೋಗಿಲ್ಲ. ಆದ್ರೆ ಮತ್ತೆ ಪುನ್ಹ ಕೇಳಿದ್ಲು ಲವ್ ಉಂಟಾ ಅಣಾ... ಹೇಳಿ ಅಣಾ...please ಅಣಾ ಅಂತ ಕೇಳೋಕೆ ಶುರು ಮಾಡಿದ್ಲು. ನಾನ್ ಮಾತ್ರ ಇವಳ ಈತರ ಪ್ರಶ್ನೆಗೆ ಒಂದ್ಸಲ ತಬ್ಬಿಬ್ಬಾಗಿ ಹೋಗಿದ್ದೆ.
.......................................................................................
ನನ್ನ Golden ಗೆಳತಿ ( ಸುಪ್ರೀತ )
ನನಗೆ ಸುಪ್ರೀತ ಅಂತ ಒಬ್ಳು ತುಂಬಾ ಕ್ಲೋಸ್ ಫ್ರೆಂಡ್ ಗೆಳತಿ ಇದ್ಲು. ಅವಳು ಎಷ್ಟು ಕ್ಲೋಸ್ ಫ್ರೆಂಡ್ ಅಂದ್ರೆ ಅವಳು ಅವಳ ಇಬ್ಬರು ಅಕ್ಕಂದಿರನ್ನ ಮತ್ ತಾಯಿಯನ್ನ ಫೋನ್ ನಲ್ಲಿ ಪರಿಚಯ ಮಾಡಿ ಕೊಟ್ಟಿದ್ಲು. ಮತ್ತೊಂದಿನ ಗೃಹ ಪ್ರವೇಶಕ್ಕೆ ಕೂಡ ಅವರ ಮನೆಯವರು ನನ್ನನ್ನ ಫೋನ್ ಮಾಡಿ ಕರೆದಿದ್ರು. ಅಷ್ಟು ಕ್ಲೋಸ್ ಫ್ರೆಂಡ್ ಅವಳು. ಇವಳಿಗೆ ನಾನೊಂದಿನ 7-8.ಚಾಕಲೇಟ್ ಗಳನ್ನ ತಂದಿದ್ದೆ. ಅದನ್ನ ನಾನು ಡೂಪ್ಲಿಕೇಟ್ ಚಾಕಲೇಟ್ ಮಾಡಿ ಅದರಲ್ಲಿ ಒಂದು ಚಾಕಲೇಟ್ ಮಾತ್ರ ಒರಿಜಿನಲ್ ಇಟ್ಟಿದ್ದೆ ಸುಮ್ನೆ ತಮಾಷೆಗೆ ಅಂತ. ಸಾಯಂಕಾಲ ಡ್ಯೂಟಿ ಮುಗಿಯುವ ಹೊತ್ತಲ್ಲಿ ಮನೆಗೆ ಹೋಗುವಾಗ ಅದನ್ನೆಲ್ಲ ಕೊಟ್ಟೆ. ಅವಳು ಅದರಲ್ಲಿ ಒಂದ್ ಹಿಡ್ಕೊಂಡು ಮಿಕ್ಕ ಎಲ್ಲ ಚಾಕಲೇಟ್ ಗಳನ್ನ ಅವಳು ತನ್ನ ಎಲ್ಲಾ ಫ್ರೆಂಡ್ಸ್ ಗೆ ಕೊಟ್ಲು. ಎಲ್ಲ ಫ್ರೆಂಡ್ಸ್ ತಿನ್ನೋಕೆ ಅಂತ ಬಾಯಿಗೆ ಹಾಕೋಕು ಅದು ಕಾಯಿ ಪೀಸ್ ಅಂತ ಗೊತ್ತಾಗುತ್ತೆ. ಆಗ ಅವಳ ಅಷ್ಟು ಫ್ರೆಂಡ್ಸ್ "
ಎಂತ ಸುಪ್ರೀತ ಹಿಂಗಾ ನಾ ಮೋಸ ಮಾಡೊದು" ಅಂತ ಬೈಯೋಕೆ ಶುರು ಮಾಡಿದ್ರಂತೆ.
ಇದನ್ನೆಲ್ಲ ಮಾರನೆ ದಿನ ಬೆಳಗ್ಗೆ ಹೇಳಿ ಬೇಜಾರು ಮಾಡ್ಕೊಂಡ್ಲು. ನನಗೆ ಮಾತ್ರ ತುಂಬಾನೆ ನಗು ಬಂತು. ನಗು ಬಂದ್ರು ನಾನು ನಗ್ಲಿಲ್ಲ. ವಿಷಯ ಸ್ವಲ್ಪ ಸೀರಿಯಸ್ ಆಗಿತ್ತು. ಆಮೇಲೆ ನೆನೆಸ್ಕೊಂಡು ನೆನೆಸ್ಕೊಂಡು ನಕ್ಕಿದ್ದೆ. ಇದೊಂದು ಗೆಳತಿಗೆ ಮಾಡಿದ ನನ್ನ ಸಣ್ಣ ಕೀಟಲೆ.
ಇದು ಊರ ಹಬ್ಬಕ್ಕೆ ಅಂತ ಅವಳು ಹೋದಾಗ ನನಗಂತ ತಂದು ಕೊಟ್ಟ ಮೊದಲ ಒಲವಿನ ಉಡುಗೊರೆ. ಇದಕ್ಕು ಒಂದು ಸ್ಟೋರಿ ಇದೆ, ಹೇಳೋಕೆ ಹೋದ್ರೆ ತುಂಬ ಆಗುತ್ತೆ. ಸಾಕಲ್ಲಾ.....?
******
ಭಯ...
........ಯಪ್ಪಾ ದೇವ ನಿಜವಾಗ್ಲು ಹೇಳ್ತೀನಿ. ಈ ಸಿನೆಮಾನ ನಾನು 4ನೇ ತರಗತಿಯಲ್ಲಿ ರಜೇಲಿ ಚಿಕ್ಕಮ್ಮನ ಮನೆ ಶಿವಪುರಕ್ಕೆ ಹೋದಾಗ ನೋಡಿದ್ದು. ಆವಾತ್ತು ಭಯ ಪಡ್ಕೊಂಡು ನೋಡಿದ ಸಿನೆಮಾನ ಇವತ್ತಿನವರೆಗು ನೋಡಿಲ್ಲ. ಆಕಾಸ್ಮಾತ್ ಟಿವಿಯಲ್ಲಿ ಏನಾದ್ರು ಬಂದಿದ್ರೆ ತಕ್ಷಣಕ್ಕೆ ಚಾನೆಲ್ ಜಂಪ್ ಮಾಡಿ ಬೇರೆ ನೋಡೋದು. ಆವತ್ತಿನ ಭಯ ಇಂದಿಗು ಹೋಗಿಲ್ಲ. ಇದನ್ನ ಬರೀಬೇಕಾದ್ರು ನನಗೆ ಸ್ವಲ್ಪ ಸ್ವಲ್ಪ ಭಯ ಇತ್ತು. ಆದ್ರು ನಿಮ್ ಜೊತೆ ಹಂಚಿಕೊಳ್ಳೊ ಧಾವಂತಕ್ಕೆ ಮರೆತೋಯ್ತು.
****
ಚಂದಿರನ ಚೋರಿ
ಇದು ನನ್ನ ಫೇವರಿಟ್ ಚಲನ ಚಿತ್ರ. ಅದ್ಯಾಕೊ ಗೊತ್ತಿಲ್ಲ ಈ ಸಿನೆಮಾ ಚಿಕ್ಕವನಿದ್ದಾಗ ಮದುವೆಯ ಸಂಭಂದೂಟ ಕಾರ್ಯಕ್ರಮದಲ್ಲಿ ನೋಡಿದ್ದೆ. ಅಲ್ಲಿಂದ ಇಷ್ಟ ಆಗಿದ್ದ ಸಿನೆಮಾ ಇವತ್ತಿನ ವರೆಗು ಯಾವ ಲವ್ ಸಿನೆಮಾ ಬರಲಿ, ಸೆಂಟಿಮೆಂಟ್ ಸಿನೆಮಾನು ಬರಲಿ ನನಗೆ ಮಾತ್ರ ಈ ಸಿನೆಮಾ ಕತೆ, ದೃಶ್ಯ, ಅಭಿನಯನೆ ಅಪ್ಪಟ ಚಿನ್ನ.
*****
You my best classmet freind.
ನನಗೊಬ್ಬ ಗೆಳೆಯನಿದ್ದ 4 ರಿಂದ 5 ನೇ ತರಗತಿವರೆಗೆ ಒಟ್ಟಿಗೆ ಇದ್ವಿ. ಅವನ ಹೆಸರು ನಿತ್ಯಾನಂದ ಅಂತ. ಅವನು ನಾನು ತುಂಬಾನೆ ಕ್ಲೋಸ್ ಫ್ರೆಂಡ್ಸ್. ಅವನು ಮನೇಲಿ ತಿಂಡಿ ಎಲ್ಲ ಮಾಡಿದ್ರೆ ನನಗು ತಂದು ಕೊಡೋನು. ಮತ್ತೆ ಯಾರಾದ್ರು ನನಗೇನಾದ್ರು ಹೊಡೆದ್ರೆ ಅವರಿಗೆ ಹೊಡಿಯೋಕೆ ಹೋಗೋನು ಅಷ್ಟು ಫ್ರೆಂಡ್ ಶಿಪ್. ಮತ್ತೊಂದು ಹೇಳ್ಬೇಕು.....ಅವನು ನನಗೆ ಭಯ ಆಗುತ್ತೆ ಅಂತ ಹೇಳಿದ್ರೆ ಮನೆ ಗೇಟ್ ತನಕ ಬಿಡೋನು ಅಷ್ಟೂ ನಮ್ಮಿಬ್ಬರ ಫ್ರೆಂಡ್ ಶಿಪ್. 6ನೇ ತರಗತಿ ಸೇರ್ಪಡೆ ಆಗುವಾಗ ನಾನು ಬೇರೆ ಆದೆ ಅವನು ಬೇರೆ ಆದ. ಇದೊಂದು ನನ್ ಸ್ವೀಟ್ ನೆನಪು.
Hai freind
*****
ಮಳೆ ರಗಳೆ|
ನಾವೆಲ್ಲ ಸ್ಕೂಲ್ ಗೆ ಹೋಗುವಾಗ ಮಳೆ ಶುರುವಾಗಿ ನೆರೆ ಶುರುವಾಗ್ತಿತ್ತು. ಮತ್ತೆ ಪುನ್ಹ ನೆರೆ ಅಂತ ರಜೆ ಕೊಡ್ತಿದ್ರು. ಆದರೆ ಈವಾಗ ಅದೇ ಉಲ್ಟಾ...!! ರಜೆ ಮುಗಿದ್ರು ಶಾಲೆಲಿ ನೀರಿಲ್ಲಾ ಅಂತ ಹೇಳಿ ಮತ್ತೆ ರಜೆಯನ್ನ ಕೊಡ್ತಾರೆ.
***
ಮೇಷ್ಟ್ರು ಶಿಕ್ಷೆ ಗರಂ....
ನಾನು 8 ನೇ ತರಗತಿಯಲ್ಲಿ ಇರುವಾಗ ನಮಗೆ ಒಬ್ರು ಹಿಂದಿ ಮೇಷ್ರು ಇದ್ರು. ಅವರ ಹೆಸರು ಸುಬ್ರಹ್ಮಣ್ಯ ಅಂತ. ನಾವು ಕ್ಲಾಸಲ್ಲಿ ಸ್ಟಡಿ ಪಿರಿಯೆಡ್ ನಲ್ಲಿ ಮಾತಾಡಿದ್ರೆ ಹುಡುಗೀರ ಹತ್ರ ಹೆಸರು ಬರಿಯೋಕೆ ಹೇಳೋರು. ನನ್ ಹೆಸರು ಒಂದಿನ ಆ ಚೀಟಿಲಿ ಬಿದ್ದಿತ್ತು. ಅದು ಮಧ್ಯಾಹ್ನದ ಸಮಯ ಕ್ಲಾಸ್ ಶುರು ಆಯ್ತು. ಹೆಸರು ಪಟ್ಟಿ ನೋಡಿದ್ರು ನಾನು ಏನೊ ಒಂದ್ ಪೆಟ್ಟು ಹೊಡಿತಾರೆ ಅಂದ್ಕೊಂಡಿದ್ದೆ ಆದ್ರೆ ಮೊದಲನೆ ಸಲ ಹೆಸರು, ಮೊದಲ ಶಿಕ್ಷೆ. ಅದು ಪಾಠನ 10 ಸಲ ಬರೀಯೋಕೆ ಹೇಳಿದ್ದು. ಯಪ್ಪಾ ದೇವ ನನಗೆ ಆವತ್ತು ಈ ತರ ಪನಿಷ್ ಮೆಂಟ್ ಇರುತ್ತೆ ಅಂತ ಆವತ್ತೆ ಗೊತ್ತಾಗಿದ್ದು. ಈವಾಗ ಸುಮ್ನೆ ಬೋರ್ ಅನ್ನಿಸಿದಾಗ ಹಂಗೆ ನೆನಪಾಗಿ ಒಂದು ನಗು ಬರುತ್ತೆ. ಈವಾಗ ನೆನೆಸ್ಕೊಳ್ಳಿಕೆ ತುಂಬ ಖುಷಿ ಆಗುತ್ತೆ ಆ ಲೈಫು. ಆವಾಗ ಯಾಕಾದ್ರು ಶಾಲೆ ಗೀಲೆ ಎಲ್ಲ ಕಂಡು ಹಿಡಿದ್ರೊ ಅನ್ನುವಷ್ಟು ಸಿಟ್ಟು, ಬೇಸರ, ಮೌನ ಎಲ್ಲನೂ ಆಗ್ತಿತ್ತು.
*****