Saturday, May 11, 2019

ಚೈತ್ರ ಹುಡುಗಿಯ ಪ್ರಶ್ನೆಗಳಿಗೆ ನೆನಪಿನ ನಾವಿಕನ ಉತ್ತರ

1. (ಚೈ)  ಹಲೋ ನೆನಪಿನ ನಾವಿಕ ಪ್ರಸಾದ್ ಮತ್ತೆ ಹೇಗಿದ್ದೀರಾ?
     (ನೆ)  ನಾನ್ ಚೆನ್ನಾಗಿದ್ದೀನಿ, ನೀವು?
     (ಚೈ) ಸೂಪರ್.....
2. (ಚೈ) ನೀವು ಕತೆ ಕವನಗಳನ್ನ ಬರೆಯುವ ಹವ್ಯಾಸ ಹೇಗೆ ಶುರು ಮಾಡಿದ್ರಿ?
     (ನೆ) ಹವ್ಯಾಸ ಶುರುವಾಗಿದ್ದು ಹೆಂಗ್ ಅಂತ ನನಗೆ ಗೊತ್ತಿಲ್ಲ. But ಹಂಗೆ ಶುರುವಾಯ್ತು.
3  (ಚೈ) ok...     .......    .......ನಾನ್ ಗೊತ್ತಿಲ್ದೆ ಕೇಳ್ತಿನಿ. ನಾನು ನಿಮ್ಮ ಕವನಗಳನ್ನ ಓದ್ತಿನಿ. ಸ್ಟೇಟಸ್ ಗೆ ಹಾಕೋಳ್ತಿನಿ. ಆದ್ರೆ ನೀವು ಬರೆಯುವ ಕವನಗಳು ಒಂದು ಹೆಣ್ಣಿನ ಕುರಿತಾಗೆ ಬರೀತಿರಲ್ಲ ಇದರ ಬಗ್ಗೆ ಹೇಳಿ.
      (ನೆ) ನಾನ್ ಬರೆಯೋದ್ರಲ್ಲಿ ಹೆಣ್ಣಿನ ಕುರಿತು ಬರೀತಿನಿ ನಿಜ. ಹಾಗೆ ಪ್ರೀತಿ- ಪ್ರೇಮ, ಜೀವನ, ಸುಖ- ದುಖ್ಹ, ಬೇಸರ, ಸಂತೋಷ ಹೀಗೆ ನಾನಾ ತರಗಳಲ್ಲಿ ಬರೀತಿನಿ. ಹೀಗೆ ಅಂತ ಏನಿಲ್ಲ.
4  (ಚೈ) ಮುಂದಿನ ಪ್ರಶ್ನೆಗೆ ಹೋಗೊ ಮೊದಲು ನಿಮಗೆ ನಾನು ಒಂದು ಮಾತ್ ಕೇಳ್ತಿನಿ. ಕೇಳಾ?
     (ನೆ) ಹ್ಂ, ಕೇಳಿ....!!
5. (ಚೈ) ನಿಮ್ಮ ಕವಿತೆಗಳನ್ನ ಓದಿ ಯಾವ ಹುಡುಗಿನಾದ್ರು ಇಲ್ಲಿ ತನಕ ಪ್ರಪೋಸ್ ಏನಾದ್ರು ಮಾಡಿದ್ರಾ?
     (ನೆ) ಹ್ಹಾ....ಹ್ಹಾ ......ಏನ್ ಚೈತ್ರ ಈ ತರ ಪ್ರಶ್ನೆ ಕೇಳ್ತಿರಾ? Ok........ ಕವಿತೆ ಬರೆದಾಕ್ಷಣ ಪ್ರಪೋಸ್ ಗಿಪೋಸ್ ಮಾಡ್ತಾರೆ ಅಂತ ನೀವು ತಿಳ್ಕೊಂಡ್ರೆ ಅದು ಖಂಡಿತಾ ನಿಮ್ ತಪ್ಪು. ಆದ್ರೆ contact ಕೇಳೋದು, ಪರಿಚಯ ಮಾಡ್ಕೊಳ್ಳೋದು, **@$"9!!?,, etc ....ಇದೆಲ್ಲ ಇದೆ.
 ಚೈತ್ರ ನೀವು ಮುಂದೆ ಈ ತರ ಪ್ರಶ್ನೆ ಕೇಳ್ಬೇಡಿ ಚೈತ್ರ ok ನಾ?
6. (ಚೈ) ok . ನಿಮಗಿಷ್ಟ ಇಲ್ಲ ಅಂದ್ರೆ ಕೇಳಲ್ಲ, ಸರಿನಾ? ಬನ್ನಿ ಮುಂದಿನ ಪ್ರಶ್ನೆ ಕೇಳ್ತಿನಿ.
7. (ಚೈ) ನೀವು ನಿಮ್ಮ ವೆಬ್ ಗೆ "ನೆನಪಿನ ನಾವಿಕ ಪ್ರಸಾದ್" ಅಂತ ಹೆಸರಿಡಲು ಕಾರಣ?
    (ನೆ) ನೆನಪುಗಳು ಅನ್ನೋದು ಪ್ರತಿಯೊಬ್ಬರಿಗು ಇರುತ್ತೆ. ಹೊಸ ನೆನಪಾಗ್ಲಿ, ಹಳೆ ನೆನಪಾಗ್ಲಿ. .......
ಈ ನೆನಪುಗಳ ವಿಚಾರದಿಂದಾನೆ ಹುಟ್ಕೊಂಡಿರೊ ಒಂದು ಹೆಸರು ನೆನಪಿನ ನಾವಿಕ.
8. (ಚೈ)  ಮುಗಿಸುವ ಮುನ್ನ ನನ್ನ ಕೊನೆಯ ಪ್ರಶ್ನೆ ....ನನ್ನನ್ನ "ನೀವು" ಅಂತ ಸಂಭೋದಿಸಬೇಡಿ "ನೀನು" ಅಂತ ಸಂಭೋದಿಸಿ ಸರಿನಾ... ಅದ್ ಸರಿ  ನಿಮಗೆ ಲವ್ ಉಂಟಾ?
     (ನೆ) ಹ್ಹಾ..ಹ್ಹಾ... ಏನ್ ಚೈತ್ರ ನೀವು? sory sory ನೀನು. ಇಂತ ಪ್ರಶ್ನೆ ಕೇಳ್ಬೇಡ ಅಂದ್ರು, ಮತ್ತೆ ಕೇಳ್ತಿಯ?


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||