ನನ್ನೊಲುಮೆಯ ನಾವಿಕನೆ
ಪ್ರತಿ ಕ್ಷಣವು ಗೀಚಿ ಬರೆಯುವ
ಈ ನಿನ್ನ ಹುಚ್ಚು ಮನಸಿಗೆ
ಏನು ಸುಖವುಂಟು?
ಏನು ಹಿತವುಂಟು?
ಪ್ರತಿ ಕ್ಷಣವು ಗೀಚಿ ಬರೆಯುವ
ಈ ನಿನ್ನ ಹುಚ್ಚು ಮನಸಿಗೆ
ಏನು ಸುಖವುಂಟು?
ಏನು ಹಿತವುಂಟು?
ನೀ ಬರೆಯುವ
ಕಾಡುವ ಕವಿತೆಗಳು
ನನ್ನ ಕಾಡುತಿದೆ
ನಾವಿಕನೆ...!
ನನ್ನದಲ್ಲದ ಕವಿತೆಗಳಿಗೆ
ಬಿಗಿದಪ್ಪಿ ಮುತ್ತಿಟ್ಟ
ನಿನ್ನ ಪ್ರೇಯಸಿ ನಾನು.
ಗೆಳೆಯ ಎನ್ನಲೆ...?
ಪ್ರಿಯ ಎನ್ನಲೆ...?
ಕಾಡುವ ಪ್ರಶ್ನೆಗೆ
ಉತ್ತರ ನೀಡು ಬಾ.....
ಸೌಂಧರ್ಯದ ಮಾಯೆಯಲಿ
ನಾ ನಿನ್ನ ಮನಸು ಕೊಡಲಿಲ್ಲ.
ನೀ ಬರೆಯುವ ಕವಿತೆಗಳಿಗೆ
ಮನಸು ಕೊಟ್ಟು
ಪ್ರತಿ ಕ್ಷಣವು ನೆನೆಯೊ
ನಿನ್ನ ಹುಚ್ಚು ಪ್ರೇಯಸಿಯಾದೆ|
ಕೇಳು ಪ್ರೀತಿಯ ನಾವಿಕನೆ
ಜನನ ಮರಣವು
ಆ ದೇವನ ಇಚ್ಛೆಯಾದರೆ
ನಿನ್ನ ಸೇರೊ ಹುಚ್ಚು ನನ್ನ ಇಚ್ಚೆ.
ನನ್ನ ಬಟ್ಟೆ ಕೆದರಿದ
ಮಾತ್ರಕೆ
ನನ್ನ ದೂರ ತಳ್ಳಬೇಡ.
ನಾ ಸೀತೆಯಷ್ಟೆ ಪವಿತ್ರಳು.
ಮತ್ತೆ ಮತ್ತೆ ಬರೆದರು
ನಾ ಓದುತಲಿರುವೆ
ಮತ್ತೆ ಮತ್ತೆ ಓದಿದರು
ನಿನ್ನ ಪ್ರೀತಿಸುತಲಿರುವೆ
ಪ್ರೀತಿಸಿ ಪ್ರೀತಿಸಿ ಸಿಗದಿದ್ದರು
ಇನ್ನೊಂದು ಜನ್ಮಕೆ ಕಾಯುವೆ.
No comments:
Post a Comment