Tuesday, May 7, 2019

ರಣ ಹಸಿವು

   ಕಾರ್ಮೋಡ
 ಕವಿದು
ಸುತ್ತಲು ಕತ್ತಲು
 ಆವರಿಸಲು
ರಸ್ತೆ ಅಂಚಿನ
ಓಣಿಯಲಿ 
ಹಾವೊಂದು
ಸರ ಸರ
 ಸದ್ದಿನೊಂದಿಗೆ
ಮನೆ ಸೇರಲು
ತಡವರಿಸಿ
ಓಡುತಿದೆ.
ಎತ್ತಿಂದಲೊ
ಸುಳಿದ 
ಕರಿ ನೆರಳು
ತನ್ನೆಡೆಗೆ
ಬರುತಿರಲು,
ತಲೆ ಎತ್ತಿ
ನೋಡಿದರೆ
ಹಿರಿದಾದ
ರಣ ಹದ್ದು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||