Tuesday, May 7, 2019

ನೀ ಬರೆದದ್ದು ನನಗಾಗಿ, ನಾ ಬರೆದದ್ದು ನಿನಗಾಗಿ

 ನೀ ಗೀಚಿ ಬರೆದ ನೆನಪಿನ ಸಾಲುಗಳಿಗೆ ಮತ್ತೆ ಜೀವ ಬಂದು ನನ್ನ ಹೃದಯ ನಾಟಲು, ಮತ್ತದೆ ಸಾಲುಗಳ ಪುಟ ತಿರುವಿ ಮತ್ತೆ ಮತ್ತೆ ನೆನೆಯಲು ತಡಕಾಡಿತು ನನ್ನೀ ಮನ. ಯಾವ ಮನ ತಲ್ಲಣವಿದು ನನ್ನೊಳಗಿನ ಮನ ಭಾವವಿದು ಯಾವುದಿದು ನಾ ತಿಳಿಯೆನು ಕಾಣೆ ಚೆಲುವೆ.
  ಮತ್ತೆ ಮತ್ತೆ ನೆನೆದು ಬರೆಯುವ ಆ ನಿನ್ನ ಪದಗಳಿಗೆ ನನ್ನಿ ಹೃದಯ ಘಮವು ತಾಕಿ ಪ್ರೇಮ ಜೀವ ಬರಲು. ನಮ್ಮಿಬ್ಬರ ಸಂಗಮದ ದಾರಿಗೆ ಬಲು ತೀರವಾಯಿತು.

  ಹೇ ಹೃದಯ ತೀರವೆ
ಸನಿಹದಲಿ ಬೀಸೊ ಅಲೆ
ಹತ್ತಿರ ಸುಳಿದಂತಿದೆ.
ಸುಳಿಗಾಳಿಯೊ ತಂಗಾಳಿಯೊ
ಮನದ ಆಹ್ಲಾದತೆಗೆ
ಸುಖ ಸಿಂಚನ ದಂತಿದೆ.

 ಬಿಗಿ ತುಟಿಯ ನಡುವಲ್ಲಿ ಬಚ್ಚಿಡೊ ಆ ನಿನ್ನ ಮನಸಿನ ನೋವಿಗೆ, ಸವಿ ಗುಡೊ ನಿನ್ನ ತುಟಿ ಮಾತುಗಳಿಗೆ, ಬಿಳಿ ಕಂಪು ಸೂಸೊ ಚಿಕ್ಕ ಹಲ್ಲುಗಳಿಗೆ, ಕಣ್ಣು ಸೆಳೆಯೊ ನಗುವಿಗೆ, ನಾ ಪಿಸುಗುಡುವ ಕಿವಿಗಳಿಗೆ ಕಿವಿಯೋಲೆಗಳಿಗೆ ನನ್ನ ಪ್ರೇಮ ನಿವೇದನೆ ತಿಳಿಸೊ ಬಗೆ ಬಗೆಯ ಪರಿ ನನ್ನದು.

 ಇಂತಿ ನಿನ್ನವ 
ನೆನಪಿನ ನಾವಿಕ (ಪ್ರಸಾದ್)

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||