Wednesday, May 8, 2019

ನನ್ನ ಪ್ರೀತಿಯ


ನನ್ನ ಹೃದಯದ ನಾವಿಕನೆ
ನೀ ಬರೆದ ಸಾಲುಗಳು
ಮತ್ತೆ ನೆನಪಾಗಿ.....!!
ನೆನಪಾದ ಸಾಲುಗಳು
ಮತ್ತೆ ನೆಪವಾಗಿ
ನಿನ್ನ ಬಳಿ ಸೆಳೆಯುತಿದೆ....!!
ಹೇ ನನ್ನ ಮುದ್ದು ಹುಡುಗನೆ
ನೀ ಬರುವ ದಾರಿಯನು 
 ಪ್ರತಿ ಕ್ಷಣವು ನಾ ಹೀಗೆ ಕಾಯಲೆ ಹೇಳು....!!


ಹಾರೊ ಮನಸಿಗೆ ನೀ ರೆಕ್ಕೆಯಾದೆ
ಬಡಿಯೊ ಹೃದಯಕೆ ಮಿಡಿತವಾದೆ
ಉಸಿರಾಡೊ ಉಸಿರಿಗೆ ಜೀವವಾದೆ
ನನ್ನಯ ಸಂಭ್ರಮಕೆ ನೀ ಬಂಧುವಾದೆ
ನಾ ಇನ್ನೇನು ಕೇಳಲಿ ಗೆಳೆಯನೆ|
ನನ್ನುಸಿರು ಇರುವರೆಗೆ ನಿನ್ನ ಪ್ರೀತಿಸುವುದೆ 
ನನ್ನುಸಿರು.

ಮತ್ತೆ ಹೇಳಲೆ...... ನೆನಪಾಗೊ ಪ್ರತಿ ಕ್ಷಣವು ನೀನು ನನ್ನ "ನೆನಪಿನ ನಾವಿಕ" ನೀನು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||