Wednesday, May 8, 2019

ಗಜಿ ಬಿಜಿ ಪ್ರೇಮ

ಬಸ್ಸಿಂದ ಇಳಿಯುವ ಗೋಜಿನಲಿ 
ಪರಿಚಯವಾದೆ ನೀನು|
ಪಕ್ಕದಲಿ ಕಾದಿರಿಸಿದ ಸೀಟಿನಿಂದ 
ಹತ್ತಿರವಾದೆ ನೀನು|
ಹತ್ತು ನಿಮಿಷದ ಅವಧಿಯಲಿ
ಹತ್ತಿ-ಇಳಿಯುವ ಹೊತ್ತಲಿ
ನನ್ನಿಂದ ದೂರಾದೆ ನೀನು||
*****

ಕಾಲೇಜು ಅವಧಿಯಲಿ ನಿತ್ಯ
ಹಾಜಾರಾಗಿ
ನಿನ್ನ ಬೆನ್ನು ಬಿದ್ದ ಬೇತಾಳ ನಾನು|
ಕಾಲೇಜು ಅಂತ್ಯಕ್ಕೆ ನನ್ನಿಂದ
ದೂರಾಗಿ
ಒಬ್ಬಂಟಿಯಾದ ಚಿತ್ತ ಚೋರಿ 
ನೀನು
*****
ನೆನಪಿನ ನಾವಿಕ@ಪ್ರಸಾದ್

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||